ಶಿವಕುಮಾರ್ ರನ್ನು ಜೈಲಿಗೆ ಕಳಿಸಲೆಂದೇ ಕುಮಾರಸ್ವಾಮಿ ಬಿಜೆಪಿ ಜೊತೆ ಸಖ್ಯ ಬೆಳೆಸಿರುವರೇ? ಕೆಎಂ ಶಿವಲಿಂಗೇಗೌಡ
ಶಿವಕುಮಾರ್ ಅವರನ್ನು ಜೈಲಿಗೆ ಕಳಿಸಲೆಂದೇ ಕುಮಾರಸ್ವಾಮಿ ದೆಹಲಿಗೆ ತೆರಳಿ ಅಮಿತ್ ಶಾ ಅವರರೊಂದಿಗೆ ಚರ್ಚಿಸಿ ಸಖ್ಯ ಬೆಳೆಸಿರಬಹುದು ಎಂದು ಶಿವಲಿಂಗೇಗೌಡ ವ್ಯಂಗ್ಯವಾಡಿದರು. ಇಂಥ ಮತುಗಳನಾಡುವ ಬದಲು ಕುಮಾರಸ್ವಾಮಿ ಜಾತ್ಯಾತೀತ ಪಕ್ಷದ ನಾಯಕರಾಗಿ ಕೋಮುವಾದ ಪಕ್ಷದೊಂದಿಗೆ ಯಾಕೆ ಮೈತ್ರಿ ಮಾಡಿಕೊಂಡಿದ್ದಾರೆ ಅಂತ ರಾಜ್ಯದ ಜನತೆಗೆ ಉತ್ತರ ನೀಡಲಿ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು.
ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಮತ್ತೇ ತಿಹಾರ್ ಜೈಲಿಗೆ ಹೋಗುತ್ತಾರೆ ಅಂತ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಕ್ಕೆ ಕಾಂಗ್ರೆಸ್ ನಾಯಕರು ಎದಿರೇಟು ನೀಡುತ್ತಿದ್ದಾರೆ. ನಗರದಲ್ಲಿಂದದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda), ಶಿವಕುಮಾರ್ ಕೊಲೆ ಮಾಡಿಯೋ ಆಥವಾ ಭ್ರಷ್ಟಾಚಾರ ನಡೆಸಿಯೋ ಜೈಲಿಗೆ ಹೋಗಿರಲಿಲ್ಲ, ಅವರ ಆಸ್ತಿ ವಿಷಯದಲ್ಲಿ ಕೊಂಚ ಹೆಚ್ಚು ಕಡಿಮೆ ಆಗಿದ್ದಕ್ಕೆ ಹೋಗಿದ್ದರು ಮತ್ತು ಅದು 4 ವರ್ಷಗಳ ಹಿಂದೆ ನಡೆದ ಘಟನೆ. ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ, ಇನ್ನು ಶಿವಕುಮಾರ್ ಜೈಲು ಹೋಗುವ ಪ್ರಮೇಯ ಹೇಗೆ ಉದ್ಭವಿಸುತ್ತದೆ? ಎಂದು ಗೌಡರು ಪ್ರಶ್ನಿಸಿದರು. ಶಿವಕುಮಾರ್ ಅವರನ್ನು ಜೈಲಿಗೆ ಕಳಿಸಲೆಂದೇ ಕುಮಾರಸ್ವಾಮಿ ದೆಹಲಿಗೆ ತೆರಳಿ ಅಮಿತ್ ಶಾ ಅವರರೊಂದಿಗೆ ಚರ್ಚಿಸಿ ಸಖ್ಯ ಬೆಳೆಸಿರಬಹುದು ಎಂದು ಶಿವಲಿಂಗೇಗೌಡ ವ್ಯಂಗ್ಯವಾಡಿದರು. ಇಂಥ ಮತುಗಳನಾಡುವ ಬದಲು ಕುಮಾರಸ್ವಾಮಿ ಜಾತ್ಯಾತೀತ ಪಕ್ಷದ ನಾಯಕರಾಗಿ ಕೋಮುವಾದ ಪಕ್ಷದೊಂದಿಗೆ ಯಾಕೆ ಮೈತ್ರಿ ಮಾಡಿಕೊಂಡಿದ್ದಾರೆ ಅಂತ ರಾಜ್ಯದ ಜನತೆಗೆ ಉತ್ತರ ನೀಡಲಿ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು
ಬಿಗ್ಬಾಸ್ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?
