Maha Kumbh 2025: ಮೇಳವೇನೋ ಅದ್ದೂರಿ, ಆದರೆ ಸ್ಥಳೀಯರಿಂದ ಯಾತ್ರಾರ್ಥಿಗಳ ಸುಲಿಗೆ ಅನಿರ್ಬಂಧಿತ!
Maha Kumbh 2025: ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ಬೆಂಗಳೂರುನಿಂದ ಪ್ರಯಾಗ್ರಾಜ್ಗೆ ಹೋಗಿರುವ ಕನ್ನಡಿಗರೊಬ್ಬರೊಂದಿಗೆ ಟವಿ9 ಪ್ರತಿನಿಧಿ ಮಾತಾಡಿದ್ದಾರೆ. ಇವರು ಹೊರಡುವ ಮೊದಲೇ ಹೋಟೆಲ್ ಬುಕ್ ಮಾಡಿದ್ದರೂ ಎರಡು ಪಟ್ಟು ಹಣವನ್ನು ತೆರಬೇಕಾಗಿದೆಯಂತೆ. ಪ್ರಯಾಗ್ ರಾಜ್ ನಲ್ಲಿ ಇಳಿದ ಕೂಡಲೇ ಯಾತ್ರಾರ್ಥಿಗಳನ್ನು ಸುಲಿಯುವ ಕೆಲಸ ಶುರುವಾಗುತ್ತಂತೆ.
ಪ್ರಯಾಗ್ರಾಜ್ (ಉತ್ತರ ಪ್ರದೇಶ): ಈ ಬಾರಿಯ ಮಹಾಕುಂಭ ಮೇಳ 144 ನೇ ವರ್ಷಕ್ಕೆ ಬಂದಿರುವಂಥದ್ದು, ಎಲ್ಲರಿಗೂ ಗೊತ್ತಿರುವಂತೆ ಕುಂಭ ಮೇಳ 12 ವರ್ಷಗಳಿಗೊಮ್ಮೆ ಜರುಗುತ್ತದೆ. ಮಹಾಕುಂಭ ಮೇಳವೇನೋ ಅದ್ದೂರಿಯಾಗಿ ನಡೆಯುತ್ತಿದೆ, ಕೋಟ್ಯಾನು ಕೋಟಿ ಜನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಅದರೆ ಇಲ್ಲಿನ ಈ-ಟ್ಯಾಕ್ಸಿ, ಬೈಕ್ ವಾಲಾಗಳು, ಆ್ಯಪ್ ಅಗ್ರಿಗೇಟೆಡ್ ಕ್ಯಾಬ್ಗಳು, ಹೋಟೆಲ್ ಗಳು, ಲಾಜ್ ಗಳು ಮನಬಂದಂತೆ ಯಾತ್ರಾರ್ಥಿಗಳ ಸುಲಿಗೆ ಮಾಡುತ್ತಿವೆ ಎಂದು ನಮ್ಮ ವರದಿಗಾರ ಹೇಳುತ್ತಾರೆ. ಪ್ರಯಾಗ್ ರಾಜ್ನಿಂದ ತ್ರಿವೇಣಿ ಸಂಗಮ್ ಸುಮಾರು 5 ಕೀಮೀ ದೂರದಲ್ಲಿದೆಯಂತೆ, ಈ-ಟ್ಯಾಕ್ಸಿಗಳು ಅಥವಾ ಬೇರೆ ಸಾರಿಗೆ ಸಾಧನಗಳು ಜನರಿಂದ ₹ 4,000-5,000 ವಸೂಲಿ ಮಾಡುತ್ತಿವೆಯಂತೆ. ಹೋಟೆಲ್ ಗಳಲ್ಲಿ ತಂಗಬೇಕಾದರೆ ಮಾಮೂಲಿ ದರಕ್ಕಿಂತ 4-5 ಪಟ್ಟು ಹೆಚ್ಚು ಹಣ ತೆರಬೇಕು, ಹಾಗಾಗಿ ಇಲ್ಲಿಗೆ ಬರಲಿಚ್ಛಿಸುವವರು ಸುಲಿಗೆ ಬಗ್ಗೆ ತಿಳಿದುಕೊಂಡಿರಲಿ ಎಂದು ನಮ್ಮ ಪ್ರತಿನಿಧಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ