ಮಹಾಲಯ ಅಮಾವಾಸ್ಯೆ: ನಟ ಧ್ರುವ ಸರ್ಜಾ ಅವರಿಂದ ವಿಶೇಷ ಪೂಜೆ
ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಅವರು ವಿಶೇಷ ಪೂಜೆ ಮಾಡಿಸಿದ್ದಾರೆ. ಕೋಲಾರ ತಾಲ್ಲೂಕು ಕೋರಗೊಂಡನಹಳ್ಳಿಯಲ್ಲಿ ಪೂಜೆ ಮತ್ತು ರುದ್ರಾಭಿಷೇಕ ಮಾಡಿಸಲಾಗಿದೆ. ಧ್ರುವ ಜತೆ ಪೂರ್ವ ವಲಯ ಡಿಸಿಪಿ ಡಿ. ದೇವರಾಜ್ ಕೂಡ ಭಾಗಿಯಾಗಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..
ಕೋಲಾರ: ಮಹಾಲಯ ಅಮಾವಾಸ್ಯೆ (Mahalaya Amavasya) ಹಿನ್ನೆಲೆಯಲ್ಲಿ ನಟ ಧ್ರುವ ಸರ್ಜಾ ಅವರಿಂದ ವಿಶೇಷ ಪೂಜೆ ಮಾಡಿಸಿದ್ದಾರೆ. ಕೋಲಾರ ತಾಲ್ಲೂಕು ಕೋರಗೊಂಡನಹಳ್ಳಿಯಲ್ಲಿ ಪೂಜೆ ಹಾಗೂ ರುದ್ರಾಭಿಷೇಕ ಮಾಡಿಸಲಾಗಿದೆ. ಪುರಾತನ ಇತಿಹಾಸ ಹೊಂದಿರುವ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ ಇದು. ಕಾಶಿ ವಿಶ್ವೇಶ್ವರ ಹಾಗೂ ಕಾಲ ಭೈರವನಿಗೆ ವಿಶೇಷ ಅಭಿಷೇಕ ಮಾಡಿಸಿದ್ದಾರೆ. ಈ ವೇಳೆ ಧ್ರುವ ಸರ್ಜಾ (Dhruva Sarja) ಜೊತೆ ಪೂರ್ವ ವಲಯ ಡಿಸಿಪಿ ಡಿ. ದೇವರಾಜ್ ಸಹ ಭಾಗಿಯಾಗಿದ್ದಾರೆ. ‘ಕೆಡಿ’ ಸಿನಿಮಾದ ಕೆಲಸಗಳಲ್ಲಿ ಧ್ರುವ ಸರ್ಜಾ ಅವರು ತೊಡಗಿಕೊಂಡಿದ್ದಾರೆ. ಅದು ನಡುವೆ ಅವರು ಕುಟುಂಬಕ್ಕೆ ಸಮಯ ನೀಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

