Viral Video: ಪೊಲೀಸ್ ಠಾಣೆಯಲ್ಲಿ ಮಹಿಳೆಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ
ಮಹಾರಾಷ್ಟ್ರದ ಪೊಲೀಸ್ ಠಾಣೆಯೊಂದರಲ್ಲಿ ಬಿಜೆಪಿ ಮುಖಂಡ ಶಿವ ತಾಯ್ಡೆ ಮಹಿಳೆಯೊಬ್ಬರಿಗೆ ಮನಬಂದಂತೆ ಥಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಘಟನೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ ಆದರೆ ಮಹಿಳೆ ಹಾಗೂ ತಾಯ್ಡೆ ಸಂಬಂಧಿಕರು ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ಮುಖಂಡನೊಬ್ಬ ಪೊಲೀಸ್ ಠಾಣೆಯಲ್ಲಿ ಮಹಿಳೆಗೆ ಮನಬಂದಂತೆ ಥಳಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಶಿವ ತಾಯ್ಡೆ ಎಂಬಾತ ಮಹಿಳೆಯ ಮೇಲೆ ಅಮಾನುಷ ಹಲ್ಲೆ ನಡೆಸಿದ್ದಾರೆ. ಪೊಲೀಸರು ತಡೆಯಲು ಯತ್ನಿಸಿದರೂ ಶಿವ ತಾಯ್ಡೆ ಮಹಿಳೆಗೆ ಥಳಿಸುತ್ತಲೇ ಇದ್ದರು. ಈ ವಿಡಿಯೋವನ್ನು ಶಿವಸೇನಾ ಠಾಕ್ರೆ ಬಣದ ಶಾಸಕಿ ಸುಷ್ಮಾ ಅಂಧಾರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬುಲ್ಡಾನಾದ ಮಲ್ಕಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಏಪ್ರಿಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ ಮಹಿಳೆಯ ಸಂಬಂಧಿಯಾಗಿರುವ ಶಿವಚಂದ್ರ ತಾಯ್ಡೆ ವಿರುದ್ಧ ಮಹಿಳೆ, ಆಕೆಯ ಮಗ ಮತ್ತು ಸೊಸೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು.
ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡುವಾಗ ಮಮಹಿಳೆ ಬಿಜೆಪಿ ನಾಯಕನ ಮಾತುಗಳನ್ನು ರೆಕಾರ್ಡ್ ಮಾಡಲು ಶುರುಮಾಡಿದ್ದರು, ಕೋಪಗೊಂಡ ತಾಯ್ಡೆ ಫೋನ್ ಕಿತ್ತುಕೊಂಡು ಮಹಿಳೆಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಗ ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ನಂತರ ಮಹಿಳೆ ಮತ್ತು ಪೊಲೀಸ್ ಅಧಿಕಾರಿಯ ಮುಂದೆಯೇ ಕುಳಿತು ಶಿವ ತಾಯ್ಡೆ ಏರು ಧ್ವನಿಯಲ್ಲಿ ಯಾವುದೋ ವಿಷಯದ ಬಗ್ಗೆ ಚರ್ಚಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಬಳಿಕ ಆತ ಸಿಟ್ಟಿನಿಂದ ಚೇರ್‌ಅನ್ನು ಹಿಂದಕ್ಕೆ ತಳ್ಳಿ ಎದ್ದು ಹೋಗುತ್ತಾನೆ. ಮಹಿಳೆ ಹಾಗೂ ಬಿಜೆಪಿ ನಾಯಕ ಪೊಲೀಸ್ ಠಾಣೆಗೆ ಏಕೆ ಬಂದಿದ್ದರು? ಮಹಿಳೆ ಮೇಲೆ ಆತ ಹಲ್ಲೆ ನಡೆಸಲು ಕಾರಣವೇನು ಅನ್ನೋದು ತಿಳಿದುಬಂದಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ