Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahesh Babu: ಪತ್ನಿ ಮತ್ತು ಮಕ್ಕಳೊಂದಿಗೆ ಸಮುದ್ರದೂರಿಗೆ ಹೊರಟ ಪ್ರಿನ್ಸ್ ಮಹೇಶ್ ಬಾಬು

Mahesh Babu: ಪತ್ನಿ ಮತ್ತು ಮಕ್ಕಳೊಂದಿಗೆ ಸಮುದ್ರದೂರಿಗೆ ಹೊರಟ ಪ್ರಿನ್ಸ್ ಮಹೇಶ್ ಬಾಬು

TV9 Web
| Updated By: shivaprasad.hs

Updated on: Aug 14, 2021 | 4:19 PM

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಮುದ್ರದೂರಿಗೆ ತೆರಳಿದ್ದಾರೆ, ಅದೂ ಕುಟುಂಬ ಸಮೇತ. ಅರೇ, ಮಹೇಶ್ ಬಾಬು ‘ಸರ್ಕಾರಿ ವಾರು ಪಾಟ’ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರಲ್ಲಾ ಎಂದು ಯೋಚಿಸುತ್ತಿದ್ದೀರಾ? ಹೌದು. ಆ ಕಾರಣವನ್ನೂ ಜೊತೆಗಿಟ್ಟುಕೊಂಡೇ ಅವರು ಗೋವಾಕ್ಕೆ ಜಿಗಿದಿದ್ದಾರೆ.

ಪತ್ನಿ ಮತ್ತು ಮಕ್ಕಳೊಂದಿಗೆ ಸಮುದ್ರದೂರಿಗೆ ತೆರಳುತ್ತಿರುವ ಮಹೇಶ್ ಬಾಬು ಚಿತ್ರಗಳು ಈಗ ಅಭಿಮಾನಿಗಳ ಮನಗೆದ್ದಿದೆ. ಅವರ ಪತ್ನಿ ನಮ್ರತಾ ಹಂಚಿಕೊಂಡಿರುವ ಚಿತ್ರಗಳು ಈಗ ವೈರಲ್ ಆಗಿವೆ. ಗೋವಾದಲ್ಲಿ ‘ಸರ್ಕಾರು ವಾರಿ ಪಾಟ’ ಚಿತ್ರದ ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಇತ್ತೀಚೆಗೆ 46ನೇ ಜನ್ಮದಿನ ಆಚರಿಸಿಕೊಂಡಿದ್ದ ಮಹೇಶ್ ಬಾಬು, ಆಗ ಅಭಿಮಾನಿಗಳ ಮುಂದೆ ವಿಶೇಷ ಕೋರಿಕೆಯೊಂದನ್ನು ಮುಂದಿಟ್ಟಿದ್ದರು. ಗ್ರೀನ್ ಇಂಡಿಯಾದ ಭಾಗವಾಗಿ ಅಭಿಮಾನಿಗಳು ಮೂರು ಗಿಡಗಳನ್ನು ನೆಟ್ಟು ಪೋಷಿಸಿ ಎಂದು ಅವರು ಮನವಿ ಮಾಡಿದ್ದರು. ಪ್ರಿನ್ಸ್ ಹುಟ್ಟು ಹಬ್ಬದ ದಿನ ‘ಸರ್ಕಾರು ವಾರಿ ಪಾಟ’ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಸರ್ಕಾರು ವಾರಿ ಪಾಟ ಚಿತ್ರವನ್ನು ಪರಶುರಾಮ್​ ಪೆಟ್ಲಾ ನಿರ್ದೇಶನ ಮಾಡಿದ್ದು, ಮಹೇಶ್​ ಬಾಬುಗೆ ನಾಯಕಿಯಾಗಿ ಕೀರ್ತಿ ಸುರೇಶ್​ ಅಭಿನಯಿಸಿದ್ದಾರೆ.

ಇದನ್ನೂ ನೋಡಿ:

Mahesh Babu: 46ನೇ ವಸಂತಕ್ಕೆ ಕಾಲಿಟ್ಟ ಪ್ರಿನ್ಸ್​ ಮಹೇಶ್​ ಬಾಬುಗೆ ‘ಬ್ಲಾಸ್ಟರ್’​ ಉಡುಗೊರೆ; ಏನಿದು?

Mahesh Babu: ಅಭಿಮಾನಿಗಳೆದುರು ವಿಶೇಷ ಕೋರಿಕೆಯೊಂದನ್ನು ಮುಂದಿಟ್ಟಿದ್ದಾರೆ ತೆಲುಗು ನಟ ಮಹೇಶ್ ಬಾಬು!