ಜಗ್ಗಪ್ಪ ಮತ್ತು ಸುಶ್ಮಿತಾ ಮದುವೆಯಲ್ಲಿ ಕಿರುತೆರೆ ತಾರಾದಂಡು

|

Updated on: Nov 19, 2023 | 6:48 PM

Majabharatha: ‘ಮಜಾಭಾರತ’ ಕಾಮಿಡಿ ರಿಯಾಲಿಟಿ ಶೋ ಖ್ಯಾತಿಯ ಜಗ್ಗಪ್ಪ ಹಾಗೂ ಸುಶ್ಮಿತಾ ಇಂದು (ನವೆಂಬರ್ 19) ರಂದು ವಿವಾಹವಾಗಿದ್ದಾರೆ. ಮದುವೆಗೆ ಹಲವು ಟಿವಿ ಹಾಗೂ ಸಿನಿಮಾ ಸೆಲೆಬ್ರಿಟಿಗಳು ಆಗಮಿಸಿದ್ದರು.

‘ಮಜಾಭಾರತ’ (Majabharatha) ಕಾಮಿಡಿ ರಿಯಾಲಿಟಿ ಶೋ (Reality Show) ಖ್ಯಾತಿಯ ಜಗ್ಗಪ್ಪ ಹಾಗೂ ಸುಶ್ಮಿತಾ ಇಂದು (ನವೆಂಬರ್ 19) ರಂದು ವಿವಾಹವಾಗಿದ್ದಾರೆ. ಮಜಾಭಾರತ ಸೆಟ್​ನಲ್ಲಿ ಪರಸ್ಪರ ಸ್ನೇಹಿತರಾಗಿ, ಪ್ರೀತಿಸಿ ಇದೀಗ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನ ಜೆಪಿ ನಗರದ ಸಿಂಧು ಕನ್ವೆನ್ಷನ್ ಸೆಂಟರ್​ನಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದೆ. ಈ ಜೋಡಿಯ ಮದುವೆಗೆ ಕಿರುತೆರೆಯ ಹಲವು ತಾರೆಗಳು ಆಗಮಿಸಿ ಶುಭಾಶಯ ಕೋರಿದ್ದಾರೆ. ನಿರಂಜನ್ ದೇಶಪಾಂಡೆ, ಪಾವಗಡ ಮಂಜು, ಇನ್ನೂ ಕೆಲವರು ಆಗಮಿಸಿದ್ದರು. ಅದರ ಜೊತೆಗೆ ನಟ ರವಿಚಂದ್ರನ್, ಪ್ರಜ್ವಲ್ ದೇವರಾಜ್ ಇನ್ನೂ ಕೆಲವು ಸಿನಿಮಾ ತಾರೆಯರು ಆಗಮಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ