ಶಂಕರ್ ನಾಗ್ ನಿಧನರಾದಾಗ ಅಂತ್ಯಸಂಸ್ಕಾರಕ್ಕೆ ಬರಲು ಮಾಸ್ಟರ್ ಮಂಜುನಾಥ್ಗೆ ಸಾಧ್ಯವಾಗಲಿಲ್ಲ; ಕಾರಣ ಏನು?
ಶಂಕರ್ ನಾಗ್ ಮತ್ತು ಮಾಸ್ಟರ್ ಮಂಜುನಾಥ್ ನಡುವೆ ಆಪ್ತತೆ ಇತ್ತು. ಚಿತ್ರರಂಗದಲ್ಲಿ ಮಾಸ್ಟರ್ ಮಂಜುನಾಥ್ಗೆ ಶಂಕರ್ ನಾಗ್ ಮಾರ್ಗದರ್ಶಕರಾಗಿದ್ದರು.
ಖ್ಯಾತ ನಟ-ನಿರ್ದೇಶಕ ಶಂಕರ್ ನಾಗ್ (Shankar Nag) ಅವರ ಜೊತೆ ಕೆಲಸ ಮಾಡಲು ಅವಕಾಶ ಪಡೆದಿದ್ದ ಅದೃಷ್ಟಶಾಲಿಗಳಲ್ಲಿ ಮಾಸ್ಟರ್ ಮಂಜುನಾಥ್ ಕೂಡ ಪ್ರಮುಖರು. ಶಂಕರ್ ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ (Malgudi Days) ಧಾರಾವಾಹಿಯಲ್ಲಿ ನಟಿಸುವ ಮೂಲಕ ಮಾಸ್ಟರ್ ಮಂಜುನಾಥ್ ಫೇಮಸ್ ಆಗಿದ್ದರು. ಆಗ ಬಾಲಕನಾಗಿದ್ದ ಅವರಿಗೆ ಹಲವು ಆಫರ್ಗಳು ಬರುತ್ತಿದ್ದವು. ಮಾಸ್ಟರ್ ಮಂಜುನಾಥ್ ಪಾಲಿಗೆ ಶಂಕರ್ನಾಗ್ ಅವರು ಮಾರ್ಗದರ್ಶಕರೂ ಆಗಿದ್ದರು. ಆದರೆ ಶಂಕ್ರಣ್ಣ ನಿಧನರಾದಾಗ ಅವರ ಅಂತ್ಯಸಂಸ್ಕಾರಕ್ಕೆ ಬರಲು ಮಾಸ್ಟರ್ ಮಂಜುನಾಥ್ ಅವರಿಗೆ ಸಾಧ್ಯವಾಗಿರಲಿಲ್ಲ. ಕಾರಣ ಇಷ್ಟೇ; ಆ ಸಂದರ್ಭದಲ್ಲಿ ನಾಗಾಭರಣ ಅವರ ಜೊತೆ ಮಾಸ್ಟರ್ ಮಂಜುನಾಥ್ (Master Manjunath) ಅವರು ಸಿನಿಮಾ ಶೂಟಿಂಗ್ ಸಲುವಾಗಿ ವಿದೇಶಕ್ಕೆ ತೆರಳಿದ್ದರು. ಈಗಿನಂತೆ ಆಗಿನ ಕಾಲದಲ್ಲಿ ವಿಮಾನದ ಸೌಲಭ್ಯ ಚೆನ್ನಾಗಿ ಇರಲಿಲ್ಲ. ‘ಶಂಕರ್ನಾಗ್ ಬದುಕಿದ್ದರೆ ನೀವು ಕೆಲಸ ಅರ್ಧಕ್ಕೆ ನಿಲ್ಲಿಸಿ ಬರುವುದನ್ನು ಅವರು ಇಷ್ಟಪಡುತ್ತಿರಲಿಲ್ಲ’ ಎಂದು ಆಪ್ತರು ಕಳಿಸಿದ ಸಂದೇಶ ನೋಡಿ ಮಾಸ್ಟರ್ ಮಂಜುನಾಥ್ ಮತ್ತು ಅವರ ತಂಡವರು ವಿದೇಶದಲ್ಲಿ ಶೂಟಿಂಗ್ ಮುಂದುವರಿಸಿದರು. ಆ ಸಂದರ್ಭವನ್ನು ಅವರು ಈಗ ನೆನಪು ಮಾಡಿಕೊಂಡಿದ್ದಾರೆ. ‘ಟಿವಿ9 ಕನ್ನಡ’ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಆ ಕುರಿತು ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.