ಸಿನಿ ಜರ್ನಿ ಬಗ್ಗೆ ಮಾತನಾಡಿದ ‘ಮಾಲ್ಗುಡಿ ಡೇಸ್​’ ಖ್ಯಾತಿಯ ಮಾಸ್ಟರ್ ಮಂಜುನಾಥ್

| Updated By: ರಾಜೇಶ್ ದುಗ್ಗುಮನೆ

Updated on: May 12, 2022 | 7:16 PM

ಸ್ವಾಮಿ ಪಾತ್ರದಿಂದ ಮಾಸ್ಟರ್​ ಮಂಜುನಾಥ್​​ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಈ ಸೀರಿಸ್​ನಿಂದ ಶಂಕರ್​​ನಾಗ್​ ಜತೆ ಅವರಿಗೆ ಒಳ್ಳೆಯ ಒಡನಾಟ ಕೂಡ ಬೆಳೆಯಿತು.

‘ಮಾಲ್ಗುಡಿ ಡೇಸ್​’ ಸೀರಿಸ್ (Malgudi Days) ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಈ ಸೀರಿಸ್​ಅನ್ನು ಈಗಲೂ ಪ್ರೇಕ್ಷಕರು ನೋಡೋಕೆ ಇಷ್ಟಪಡುತ್ತಾರೆ. ಮಾಸ್ಟರ್ ಮಂಜುನಾಥ್ ಅವರು ಸ್ವಾಮಿ ಆಗಿ ಮಿಂಚಿದರು. ಅವರ ಪಾತ್ರವನ್ನೂ ಈಗಲೂ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಸ್ವಾಮಿ ಪಾತ್ರದಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಈ ಸೀರಿಸ್​ನಿಂದ ಶಂಕರ್​​ನಾಗ್​ ಜತೆ ಅವರಿಗೆ ಒಳ್ಳೆಯ ಒಡನಾಟ ಕೂಡ ಬೆಳೆಯಿತು. ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ. ಮಾಸ್ಟರ್ ಮಂಜುನಾಥ್ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಮೂರನೇ ವಯಸ್ಸಿನಲ್ಲಿ ಅನ್ನೋದು ವಿಶೇಷ. ಶಂಕರನಾಗ್​ (Shankar Nag) ಅವರು ಸ್ಯಾಂಡಲ್​​ವುಡ್​ನಲ್ಲಿ ಸಾಕಷ್ಟು ಕ್ರಾಂತಿ ಮಾಡಿದ ನಿರ್ದೇಶಕ ಹಾಗೂ ನಟ. ಅಂದಿನ ಕಾಲದಲ್ಲೇ ಭಿನ್ನ ಸಿನಿಮಾಗಳನ್ನು ಮಾಡಿ ಭೇಷ್ ಎನಿಸಿಕೊಂಡಿದ್ದರು. ಬೆಂಗಳೂರಿಗೆ ಮೆಟ್ರೋ ತರುವ ಬಗ್ಗೆ ಅವರು ಅಂದೇ ಆಲೋಚಿಸಿದ್ದರು. ಸಿನಿಮಾಗಳ ಬಗ್ಗೆ ಅವರು ಸಾಕಷ್ಟು ಕನಸು ಕಂಡಿದ್ದರು. ಶಂಕರ್ ನಾಗ್ ಅವರ ಜತೆ ಮಾಸ್ಟರ್ ಮಂಜುನಾಥ್ ಆಪ್ತವಾಗಿದ್ದರು.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.