ಬಿಗ್ ಬಾಸ್ ಬಳಿಕ ಸಿನಿಮಾ ಅವಕಾಶ ಪಡೆದ ಮಲ್ಲಮ್ಮ; ಬದಲಾಯ್ತು ಲೈಫ್
ಮಾತಿನ ಮಲ್ಲಮ್ಮ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಸ್ಪರ್ಧಿಸಿದ ಬಳಿಕ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಈಗ ಅವರಿಗೆ ಸಿನಿಮಾಗಳಿಂದ ಅವಕಾಶಗಳು ಸಿಗುತ್ತಿವೆ. ಅಲ್ಲದೇ, ಧಾರಾವಾಹಿಗಳಲ್ಲಿ ನಟಿಸುವ ಆಫರ್ ಕೂಡ ಬಂದಿದೆ. ಆ ಬಗ್ಗೆ ಅವರು ಟಿವಿ9 ಜತೆಗೆ ಮಾತನಾಡಿದ್ದಾರೆ.
ಮಾತಿನ ಮಲ್ಲಮ್ಮ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಹೆಚ್ಚು ಖ್ಯಾತಿ ಪಡೆದುಕೊಂಡರು. ಈಗ ಅವರಿಗೆ ಸಿನಿಮಾಗಳಿಂದ ಅವಕಾಶಗಳು ಸಿಗುತ್ತಿವೆ. ಅಲ್ಲದೇ, ಧಾರಾವಾಹಿಗಳಲ್ಲಿ ನಟಿಸುವ ಆಫರ್ ಸಹ ಬಂದಿದೆ. ಆ ಬಗ್ಗೆ ಮಲ್ಲಮ್ಮ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ‘ವಿನಾಶಕಾಲೇ’ ಸಿನಿಮಾದಲ್ಲಿ ಮಲ್ಲಮ್ಮ ಅವರು ನಟಿಸುತ್ತಿದ್ದಾರೆ. ತಾಯಿಯ ಪಾತ್ರ ಮಾಡಲು ಅವರು ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಶೋನಿಂದ ತಮ್ಮ ಬದುಕು ಬದಲಾಗಿದೆ ಎಂದು ಮಲ್ಲಮ್ಮ (Mallamma) ಹೇಳಿದ್ದಾರೆ. ಈಗ ಎಲ್ಲರೂ ಅವರನ್ನು ಗುರುತಿಸುತ್ತಾರೆ. ಚಿಕ್ಕ ಮಕ್ಕಳಿಗೂ ಕೂಡ ಮಲ್ಲಮ್ಮ ಯಾರು ಎಂಬುದು ಗೊತ್ತಾಗಿದೆ. ನಟನೆಯನ್ನು ಕಲಿತು ಸಿನಿಮಾಗಳಲ್ಲಿ ನಟಿಸುವುದಾಗಿ ಮಲ್ಲಮ್ಮ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
