ಪ್ರಧಾನಿ ಮೋದಿಯವರನ್ನು ಟೀಕಿಸುವ ಮೊದಲು ಖರ್ಗೆ ಅಂಕಿ-ಅಂಶಗಳನ್ನು ನೋಡಲಿ: ಗೋವಿಂದ ಕಾರಜೋಳ

|

Updated on: Nov 02, 2024 | 6:41 PM

ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರಿಗೆ ದಲಿತರ ಏಳಿಗೆ ಬೇಕಿಲ್ಲ; ಬಡವರನ್ನು, ದಲಿತರನ್ನು ಮೋಸ ಮಾಡೋದು ಬಹಳ ಸುಲಭ, ಇಷ್ಟು ವರ್ಷಗಳ ಕಾಲ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅದನ್ನೇ ಮಾಡಿಕೊಂಡು ಬಂದಿದ್ದಾರೆ, ದಲಿತರು ಕೊಳೆಗೇರಿಯಲ್ಲೇ ಇರಬೇಕೆಂದು ಸಚಿವ ಬಯಸುತ್ತಾರೆ ಎಂದು ಕಾರಜೋಳ ಹೇಳಿದರು.

ಬಳ್ಳಾರಿ: ನಗರದಲ್ಲಿಂದು ಸುದ್ದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಸಂಸದ ಗೋವಿಂದ ಕಾರಜೋಳ ಅವರು ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ನೀತಿ ಮತ್ತು ಆಡಳಿತ ವೈಖರಿ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿರುವ ಟೀಕೆಗೆ ಉತ್ತರಿಸುತ್ತಾ, ವಿಶ್ವದಲ್ಲಿ ಕೊರೋನಾ ವೈರಸ್ ತಾಂಡವಾಡುತ್ತಿದ್ದಾಗ ಅಮೆರಿಕ ಮತ್ತು ಚೀನಾದಂಥ ಶ್ರೀಮಂತ ರಾಷ್ಟ್ರಗಳೇ ದಿವಾಳಿಯೆದ್ದವು, ಅದರೆ ಭಾರತ ಮಾತ್ರ ಆರ್ಥಿಕವಾಗಿ ಪ್ರಗತಿ ಪಥದಲ್ಲಿ ಸಾಗಿತು, ಮೋದಿ ಮತ್ತು ವಿಶ್ವದ ಇತರ ನಾಯಕರ ನಡುವಿನ ವ್ಯತ್ಯಾಸವೇ ಅದು, ಹಾಗಾಗೇ ಅವರು ಕಳೆದ 23 ವರ್ಷಗಳಿಂದ ನಿರಂತರವಾಗಿ ಸಂವೈಧಾನಿಕ ಹುದ್ದೆಯಲ್ಲಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಡಿನೋಟಿಫಿಕೇಷನ್ ಪ್ರಕರಣದಲ್ಲಿ ಈಡಿ ಕುಮಾರಸ್ವಾಮಿಗೆ ಯಾಕೆ ನೋಟೀಸ್ ನೀಡಿಲ್ಲ? ಸಂತೋಷ್ ಲಾಡ್

Follow us on