ಟಾಟಾ ಐಪಿಎಲ್-2025ಕಪ್ ನಮ್ಮದು: ಆರ್​ಸಿಬಿ ಗೆಲುವಿಗೆ ಕುಣಿದು ಕುಪ್ಪಳಿಸಿದ ಮಾಲೂರು ಶಾಸಕ ನಂಜೇಗೌಡ

ಅರುಣ್​ ಕುಮಾರ್​ ಬೆಳ್ಳಿ

Updated on: Jun 04, 2025 | 11:38 AM

ನಂಜೇಗೌಡರಿಗೆ ಈಗ 63ರ ಪ್ರಾಯ, ಅದರೆ ಅವರು ಯುವಕರಂತೆ ಕುಣಿದು ಬೆಂಗಳೂರು ತಂಡದ ಗೆಲುವಿಗೆ ಹರ್ಷ ವ್ಯಕ್ತಪಡಿಸಿದರು. ಅಭಿಮಾನಿಗಳು ಅವರನ್ನೆತ್ತಿಕೊಂಡು, ಹೆಗಲ ಮೇಲೆ ಕೂರಿಸಿಕೊಂಡು ಕುಣಿಯುವಾಗಲೂ ಶಾಸಕ ಹರ್ಷಚಿತ್ತರು. ರಜತ್ ಪಾಟೀದಾರ್ ತಂಡ ಕನ್ನಡ ನಾಡಿನ ಜನರಿಗೆ ಪೂರ್ತಿ ಒಂದು ವರ್ಷಕ್ಕಾಗುವಷ್ಟು ಸಂತಸ ನೀಡಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಕೋಲಾರ, ಜೂನ್ 4: ನಮ್ಮ ರಾಜಕಾರಣಿಗಳಲ್ಲಿ ಅನೇಕರು ಅರ್​ಸಿಬಿ ಫ್ಯಾನ್​ಗಳು. ಹಾಗೆ ನೋಡಿದರೆ, ನಿನ್ನೆ ಬೆಂಗಳೂರು ತಂಡ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್​ಶಿಪ್ ಗೆದ್ದಿರೋದನ್ನ ಸಂಭ್ರಮಿಸದ ಕನ್ನಡಿಗನೇ ಇಲ್ಲ. ನಟ ಕಮಲ್ ಹಾಸನ್ ಸಂಭ್ರಮಿಸಿರಲಿಕ್ಕಿಲ್ಲ, ಆ ಮಾತು ಬೇರೆ! ಮಾಲೂರಿನ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ನಿಮಗೆ ಗೊತ್ತಲ್ವಾ? ಅವರು ಪಕ್ಕಾ ಕ್ರಿಕೆಟ್ ಪ್ರೇಮಿ ಮತ್ತು ಆರ್​ಸಿಬಿ ಅಭಿಮಾನಿ. ಅವರ ಕುಟುಂಬದ ಸದಸ್ಯರೂ ಕ್ರಿಕೆಟ್ ಪ್ರೇಮಿಗಳೇ. ನಿನ್ನೆ ರಾತ್ರಿ ಕುಟುಂಬದವರೆಲ್ಲ ಸೇರಿ ಆರ್ಸ್​ಸಿಬಿ ಗೆಲುವನ್ನು ಆಚರಿಸಿದರು.

ಇದನ್ನೂ ಓದಿ:  ಕಾರನ್ನು ಸಂಪೂರ್ಣವಾಗಿ ಆರ್​ಸಿಬಿಮಯಗೊಳಿಸಿ ನೆಚ್ಚಿನ ತಂಡಕ್ಕೆ ಒಂದು ಚಿಕ್ಕ ಟ್ರಬ್ಯೂಟ್ ಎಂದು ಕಾರಿನ ಒಡೆಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.