ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ: ಕಾಮಾಂಧ ಪೊಲೀಸ್​ ವಶಕ್ಕೆ

Updated By: ರಮೇಶ್ ಬಿ. ಜವಳಗೇರಾ

Updated on: Mar 14, 2025 | 10:22 PM

ಮೂಕ ಪ್ರಾಣಿ ಮೇಲೆ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಶ್ವಾನದ ಮೇಲೆ ಅತ್ಯಾಚಾರವೆಸಗಿ ಗಾಯಗೊಳಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಬೆಂಗಳೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ ಬಳಿ ಈ ಘಟನೆ ನಡೆದಿದೆ. ಸದ್ಯ ಜನರು ವ್ಯಕ್ತಿಯನ್ನು ಹಿಡಿದು ಥಳಿಸಿ ಬಳಿಕ ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಂಗಳೂರು, (ಮಾರ್ಚ್​ 14): ಮೂಕ ಪ್ರಾಣಿ ಮೇಲೆ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿ ಗಾಯಗೊಳಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಬೆಂಗಳೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ ಬಳಿ ಈ ಘಟನೆ ನಡೆದಿದೆ. ಇಬ್ಬರು ಪುರುಷರು ಶ್ವಾನದ ಮರ್ಮಾಂಗವನ್ನು ಕೊಯ್ದು ಸಂಬೋಗ ಮಾಡಿದ ಆರೋಪ ಕೇಳಿಬಂದಿದೆ. ಸದ್ಯ ಸಾರ್ವಜನಿಕರು ನೋಡಿ ವ್ಯಕ್ತಿಗೆ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಜಯನಗರದ ಸುತ್ತ ಮುತ್ತ ವಿದ್ಯಾ ಎಂಬುವ ಮಹಿಳೆ ಶ್ವಾನಗಳಿಗೆ ಪ್ರತಿನಿತ್ಯ ಊಟ ಹಾಕುತ್ತಾರೆ. ನಿನ್ನೆ (ಮಾರ್ಚ್​ 13) ರಾತ್ರಿ ಅದೇ ರೀತಿ ಶ್ವಾನಕ್ಕೆ ಊಟ ನೀಡಲು ಹೋಗಿದ್ದಾರೆ. ಆ ವೇಳೆ ವ್ಯಕ್ತಿಯೋರ್ವ ಶ್ವಾನದ ಜೊತೆ ಸಂಬೋಗ ಮಾಡುತ್ತಿರುವುದನ್ನು ನೋಡಿದ್ದಾರೆ. ಕುಡಲೇ ಶ್ವಾನವನ್ನು ರಕ್ಷಣೆ ಮಾಡಿದ್ದಾರೆ. ನಂತರ ಇಂದು ಸಂಜೆ ಅದೇ ಶಾಲಿನಿ ಮೈದಾನದ ಬಳಿ ಶ್ವಾನಪ್ರೀಯರು ತೆರಳಿದ್ದಾರೆ. ಈ ವೇಳೆ ಅದೇ ವ್ಯಕ್ತಿ ಕಂಡಿದ್ದಾನೆ. ಬಳಿಕ ವ್ಯಕ್ತಿಯನ್ನು ಹಿಡಿದು ಥಳಿಸಿ ಬಳಿಕ ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

Published on: Mar 14, 2025 10:17 PM