Bengaluru: ಹೆತ್ತ ಅಮ್ಮ-ಅಪ್ಪನನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಂದ ಮದ್ಯವ್ಯಸನಿ ಮಗ

|

Updated on: Jul 18, 2023 | 5:07 PM

ಪೊಲೀಸ್ ಮೂಲಗಳ ಪ್ರಕಾರ ಶರತ್ ಮದ್ಯವ್ಯಸನಿಯಾಗಿದ್ದ ಮತ್ತು ಆಗಾಗ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ.

ಬೆಂಗಳೂರು: ಇವನಂಥ ಮಕ್ಕಳೂ ಇರುತ್ತಾರೆ ನತದೃಷ್ಟ (unfortunate) ತಂದೆತಾಯಿಗಳಿಗೆ. ವಯಸ್ಸಾದ ತಂದೆ ತಾಯಿಯನ್ನು ಅಕ್ಕರೆಯಿಂದ ಸಲುಹಬೇಕಿದ್ದ ಮಗನೊಬ್ಬ ಕುಡಿದ ಮತ್ತಿನಲ್ಲಿ ಅವರಿಬ್ಬರನ್ನು ಕಬ್ಬಿಣದ ಸಲಾಕೆಯಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಂದಿರುವ ಘಟನೆ ನಿನ್ನೆ ಸಾಯಂಕಾಲ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ. ಹತ್ಯೆಗೀಡಾದವರನ್ನು ಭಾಸ್ಕರ್ (Bhaskar) ಮತ್ತು ಶಾಂತಾ (Shanta) ಎಂದು ಗುರುತಿಸಲಾಗಿದೆ. ಇವರು ಅಸಲಿಗೆ ಮಂಗಳೂರು ಮೂಲದವರು ಮತ್ತು ಕಳೆದ 28 ವರ್ಅ ವರ್ಷಗಳಿಂದ ಬೆಂಗಳೂರಲ್ಲಿ ನೆಲೆಸಿದ್ದರು. ಭಾಸ್ಕರ ಹೋಟೆಲೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಶಾಂತಾ ಕೇಂದ್ರ ಸರ್ಕಾರದ ಉದ್ಯೋಗಿಯಾಗಿದ್ದರು ಮತ್ತು ಇತ್ತೀಚೆಗೆ ಸೇವೆಯಿಂದ ನಿವೃತ್ತರಾಗಿದ್ದರು, ಕೊಲೆ ಆರೋಪಿ ಶರತ್ ಕಣ್ಮರೆಯಾಗಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ಶರತ್ ಮದ್ಯವ್ಯಸನಿಯಾಗಿದ್ದ ಮತ್ತು ಆಗಾಗ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 18, 2023 05:06 PM