Bengaluru Crime News: ಅನೈತಿಕ ಸಂಬಂಧ ಶಂಕಿಸಿ ಪತ್ನಿಯನ್ನು ಭೀಕರವಾಗಿ ಕೊಚ್ಚಿ ಕೊಂದ ಪತಿ

ಅಪ್ಪ-ಅಮ್ಮ ಇಲ್ಲದೆ ಅನಾಥಾಶ್ರಮದಲ್ಲಿ ಬೆಳೆದ ನಾಗರತ್ನಳನ್ನು 12 ವರ್ಷಗಳ ಹಿಂದೆ ಅಯ್ಯಪ್ಪ ಮದುವೆಯಾಗಿದ್ದ. ದಂಪತಿಗೆ 11 ವರ್ಷದ ಮಗ ಹಾಗೂ 7 ವರ್ಷದ ಮಗಳು ಇದ್ದಾಳೆ.

Bengaluru Crime News: ಅನೈತಿಕ ಸಂಬಂಧ ಶಂಕಿಸಿ ಪತ್ನಿಯನ್ನು ಭೀಕರವಾಗಿ ಕೊಚ್ಚಿ ಕೊಂದ ಪತಿ
ಪ್ರಾತಿನಿಧಿಕ ಚಿತ್ರ
Follow us
ಆಯೇಷಾ ಬಾನು
|

Updated on: Jun 05, 2023 | 7:01 AM

ಬೆಂಗಳೂರು: ಅನುಮಾನಂ ಪೆದ್ದ ರೋಗಂ ಎಂಬ ಮಾತಿನಂತೆ ಒಮ್ಮೆ ಮನುಷ್ಯನಲ್ಲಿ ಅನುಮಾನ ಹುಟ್ಟಿಕೊಂಡರೆ ಅದು ಜೀವನವನ್ನು ನಾಶ ಮಾಡದೆ ಬಿಡದು. ಅದರಂತೆ ಅನೈತಿಕ ಸಂಬಂಧ ಆರೋಪ ಹಿನ್ನೆಲೆ ಪತಿಯಿಂದಲೇ ಪತ್ನಿಯ ಹತ್ಯೆ ನಡೆದಿರುವ ಭಯಾನಕ ಘಟನೆ ಬೆಂಗಳೂರಿನ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ(Husband killed his wife). ಚಾಕುವಿನಿಂದ ಇರಿದು ಪತಿ ಅಯ್ಯಪ್ಪ ತನ್ನ ಪತ್ನಿ ನಾಗರತ್ನ(32) ಹತ್ಯೆಗೈದಿದ್ದಾರೆ. ಚಾಕುವಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿ, ಮಹಿಳೆಯ ಗುಪ್ತಾಂಗಕ್ಕೂ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.

ಅಪ್ಪ-ಅಮ್ಮ ಇಲ್ಲದೆ ಅನಾಥಾಶ್ರಮದಲ್ಲಿ ಬೆಳೆದ ನಾಗರತ್ನಳನ್ನು 12 ವರ್ಷಗಳ ಹಿಂದೆ ಅಯ್ಯಪ್ಪ ಮದುವೆಯಾಗಿದ್ದ. ದಂಪತಿಗೆ 11 ವರ್ಷದ ಮಗ ಹಾಗೂ 7 ವರ್ಷದ ಮಗಳು ಇದ್ದಾಳೆ. ಅಯ್ಯಪ್ಪ ತನ್ನ ಅಕ್ಕನ ಮನೆಯಲ್ಲಿ ಮಕ್ಕಳನ್ನು ಬಿಟ್ಟಿದ್ದ. ಇತ್ತೀಚೆಗೆ ಹೆಂಡತಿ ಮೇಲೆ ಅನುಮಾನ ಪಡುತ್ತಾ ಇದ್ದ. ಈ ವಿಚಾರಕ್ಕೆ ಮೂರು ದಿನಗಳಿಂದ ದಂಪತಿ ಮಧ್ಯೆ ಗಲಾಟೆ ನಡೀತಾ ಇತ್ತು. ಸದ್ಯ ಪತ್ನಿ ನಾಗರತ್ನ ಕೊಲೆಗೈದ ಪತಿ ಅಯ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬಸವೇಶ್ವರ ನಗರ ಪೊಲೀಸರು ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Dharwad News: ನೇಣು ಬಿಗಿದುಕೊಂಡು ಸಹೋದರಿಯರು ಆತ್ಮಹತ್ಯೆಗೆ ಶರಣು

ಮೈಸೂರಿನಲ್ಲಿ ಅಪರಿಚಿತ ಶವ ಪತ್ತೆ

ಮೈಸೂರು ಜಿಲ್ಲೆಯ ಸೇತುವೆ ಬಳಿ ಅಪರಿಚಿತ ಶವ ಪತ್ತೆಯಾಗಿದೆ. ಹುಣಸೂರು ಪಟ್ಟಣದ ಹೊಸ ಸೇತುವೆ ಬಳಿ ಸುಮಾರು 50 ರಿಂದ 54 ವರ್ಷ ವಯಸ್ಸಿನ ವ್ಯಕ್ತಿಯ ಶವ ಸಿಕ್ಕಿದೆ. ಈ ಶವ ಕೊಳೆತ ಸ್ಥಿತಿಯಲ್ಲಿದ್ದು ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ