ಭಯಾನಕ ವಿಡಿಯೋ… ಸ್ಟೆತಾಸ್ಕೋಪ್ ಇಟ್ಟು ಪರೀಕ್ಷಿಸುತ್ತಿರುವಾಗಲೇ ಹೃದಯಾಘಾತ, ಯುವಕ ಸಾವು
Indore Man Died During Doctor Check Up: ಮೃತರನ್ನು ಇಂದೋರ್‌ನ ಶಿವಾಜಿ ನಗರದ ಸೋನು ಮಟ್ಕರ್ (31) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದರಿಂದ ಸಮೀಪದ ಕ್ಲಿನಿಕ್ ಗೆ ತೆರಳಿದ್ದರು. ಗಟ್ಟಿಮುಟ್ಟಿಯಾಗಿಯೇ ಇದ್ದ ಸೋನು ವೈದ್ಯರ ಪಕ್ಕದಲ್ಲಿ ತಪಾಸಣೆಗಾಗಿ ಕುರ್ಚಿಯಲ್ಲಿ ಕುಳಿತಿದ್ದರು. ವೈದ್ಯರು ತಪಾಸಣೆ ನಡೆಸುತ್ತಿರುವುದು ಸಹ ವಿಡಿಯೋದಲ್ಲಿ ಕಂಡು ಬಂದಿದೆ. ಅಷ್ಟರಲ್ಲಿ ಸೋನು ಹಠಾತ್ತನೆ ವೈದ್ಯರ ಟೇಬಲ್ ಮೇಲೆ ಬಿದ್ದು ಅಸುನೀಗಿದ್ದಾರೆ.
ಇಂದೋರ್, ಆಗಸ್ಟ್ 20: ಅನಾರೋಗ್ಯದಿಂದ ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬರು ಸೆಕೆಂಡ್‌ಗಳಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ವೈದ್ಯರು ಸ್ಟೆತಾಸ್ಕೋಪ್ ಇಟ್ಟು ಪರೀಕ್ಷಿಸುತ್ತಿರುವಾಗಲೇ ಹೃದಯಾಘಾತಕ್ಕೀಡಾದ ವ್ಯಕ್ತಿ ವೈದ್ಯರ ಟೇಬಲ್ ಮೇಲೆ ಉರುಳಿ ಸಾವನ್ನಪ್ಪಿದ್ದಾರೆ. ಇಂದೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೃತರನ್ನು ಇಂದೋರ್‌ನ ಶಿವಾಜಿ ನಗರದ ಸೋನು ಮಟ್ಕರ್ (31) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದರಿಂದ ಸಮೀಪದ ಕ್ಲಿನಿಕ್ ಗೆ ತೆರಳಿದ್ದರು. ಗಟ್ಟಿಮುಟ್ಟಿಯಾಗಿಯೇ ಇದ್ದ ಸೋನು ವೈದ್ಯರ ಪಕ್ಕದಲ್ಲಿ ತಪಾಸಣೆಗಾಗಿ ಕುರ್ಚಿಯಲ್ಲಿ ಕುಳಿತಿದ್ದರು. ವೈದ್ಯರು ತಪಾಸಣೆ ನಡೆಸುತ್ತಿರುವುದು ಸಹ ವಿಡಿಯೋದಲ್ಲಿ ಕಂಡು ಬಂದಿದೆ. ಅಷ್ಟರಲ್ಲಿ ಸೋನು ಹಠಾತ್ತನೆ ವೈದ್ಯರ ಟೇಬಲ್ ಮೇಲೆ ಬಿದ್ದರು.
ಕೂಡಲೇ ಅವರನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಈಗಾಗಲೇ ಆತ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಜಮುನಾ ಇಂದೋರ್‌ನ ಪರದೇಶಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ (ಆಗಸ್ಟ್ 18) ಬೆಳಗಿನ ಜಾವ ಈ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯಿಂದ ಸೋನುಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. ಈ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆತಂಕ ಸೃಷ್ಟಿಸಿದೆ.
Also Read: Bad Habits at Home – ಮನೆಯಲ್ಲಿ ಮಹಿಳೆಯರು ಅನುಸರಿಸುವ ಆರು ಅಭ್ಯಾಸಗಳಿಂದ ಹಣದ ಕೊರತೆ, ಸಮಸ್ಯೆಗಳು ಹೆಚ್ಚಾಗುತ್ತವೆ!
ಮೃತ ಸೋನು ಅವರು ಪತ್ನಿ ಹಾಗೂ ಮೂರು ವರ್ಷದ ಮಗನನ್ನು ಅಗಲಿದ್ದಾರೆ. ಸೋನು ಎಲ್‌ಐಸಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರ ಸಹೋದರ ಗಣೇಶ್ ಹೇಳಿದ್ದಾರೆ. ಆದರೆ 5 ತಿಂಗಳ ಹಿಂದೆ ಸೋನು ಅವರ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರಭಾತ್ ಕುಮಾರ್ ಸಾಹು ಮತ್ತು ಬಾಘರಾಯ್ ಮಾಝಿ ಯಾವುದೇ ಕಾರಣವಿಲ್ಲದೆ ಕೇವಲ ಮೌಖಿಕ ಆದೇಶದ ಮೂಲಕ ಸೋನು ಅವರನ್ನು ವಜಾಗೊಳಿಸಿದ್ದರು. ಅಂದಿನಿಂದ ಸೋನು ತೀವ್ರ ನೊಂದಿದ್ದರು. ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಯೋಚಿಸಿದ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೇಲಧಿಕಾರಿಗಳಿಂದ ತನಗೆ ಅನ್ಯಾಯವಾಗಿದೆ ಎಂದು ಸೋನು ತನ್ನ ಸ್ನೇಹಿತರಿಗೆ ಪದೇ ಪದೇ ಹೇಳುತ್ತಿದ್ದ ಎಂದು ಅವರು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ