ಧಾರವಾಡ: ಬೆಳಗಲಿ ಕ್ರಾಸ್ ಬಳಿ ರಸ್ತೆ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು

ಮಹ್ಮದ್ ನವಾಜ್ ತಮ್ಮ ಎಡದಿಂದ ಬಲಕ್ಕೆ ರಸ್ತೆಯನ್ನು ಕ್ರಾಸ್ ಮಾಡುವಾಗ ಹಿಂದಿನಿಂದ ಬರುತ್ತಿದ್ದ ವೇಗವಾಗಿ ಚಲಿಸುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

TV9kannada Web Team

| Edited By: Arun Belly

Nov 22, 2022 | 10:50 AM

ಧಾರವಾಡ:  ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಬೆಳಗಳಿ ಕ್ರಾಸ್ (Belagali cross) ಬಳಿ ಮಂಗಳವಾರ ಬೆಳಗ್ಗೆ ನಡೆದ ಭೀಕರ ಅಪಘಾತವೊಂದು ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ ಸವಾರ 29-ವರ್ಷ-ವಯಸ್ಸಿನ ಮಹ್ಮದ್ ನವಾಜ್ (Mohammad Nawaz) ತಮ್ಮ ಎಡದಿಂದ ಬಲಕ್ಕೆ ರಸ್ತೆಯನ್ನು ಕ್ರಾಸ್ ಮಾಡುವಾಗ ಅವರ ಹಿಂದಿನಿಂದ ಬರುತ್ತಿದ್ದ ವೇಗವಾಗಿ ಚಲಿಸುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ನಂತರ ಲಾರಿ ಚಾಲಕ (truck driver) ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು  ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada