ಯಾದಗಿರಿ: ಹಯ್ಯಾಳ ಗ್ರಾಮದಲ್ಲಿ ದೇವರ ಮೂರ್ತಿ ಕದ್ದ ಚೋರನಿಗೆ ಬಹಳ ದೂರದವರೆಗೆ ಹೊತ್ತೊಯ್ಯುವುದು ಸಾಧ್ಯವಾಗಿಲ್ಲ!
ಆದರೆ ಕಳ್ಳನಿಗೆ ಮೂರ್ತಿಯನ್ನು ಬಹಳ ದೂರದವರೆಗೆ ಹೊತ್ತೊಯ್ಯುವುದು ಸಾಧ್ಯವಾಗದೆ ಪಕ್ಕದ ಗ್ರಾಮವೊಂದರ ರಸ್ತೆ ಬದಿ ಅದನ್ನಿಟ್ಟು ಪರಾರಿಯಾಗಿದ್ದಾನೆ.
ದಾವಣಗೆರೆ: ವಿಗ್ರಹ ಚೋರರದು ಒಂದು ದೊಡ್ಡ ಇತಿಹಾಸ ನಮ್ಮ ಮುಂದಿದೆ. ದೇವರ ವಿಗ್ರಹಗಳನ್ನು ಕಳುವು ಮಾಡುವ ದುಷ್ಟ ಕಾಯಕ ಮುಂದುವರಿದಿದೆ. ಯಾದಗಿರಿ (Yadgir) ಜಿಲ್ಲೆ ವಡಗೇರ ತಾಲ್ಲೂಕಿನ ಹಯ್ಯಾಳ (Hayyala) ಗ್ರಾಮದಲ್ಲಿ ಸುಮಾರು ಒಂದು ಲಕ್ಷ ರೂ. ಬೆಲೆಬಾಳುವ ಹಯ್ಯಾಳಲಿಂಗೇಶ್ವರ (Hayyalalingeshwara) ದೇವರ ಮೂರ್ತಿಯನ್ನು ಕಳ್ಳನೊಬ್ಬ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ದೇವಸ್ಥಾನದ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಆದರೆ ಕಳ್ಳನಿಗೆ ಮೂರ್ತಿಯನ್ನು ಬಹಳ ದೂರದವರೆಗೆ ಹೊತ್ತೊಯ್ಯುವುದು ಸಾಧ್ಯವಾಗದೆ ಪಕ್ಕದ ಗ್ರಾಮವೊಂದರ ರಸ್ತೆ ಬದಿ ಅದನ್ನಿಟ್ಟು ಪರಾರಿಯಾಗಿದ್ದಾನೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Tue, 22 November 22