ಹಾವು ಹಿಡಿದ ವ್ಯಕ್ತಿಯೊಬ್ಬ ಕೊರಳಿಗೆ ಸುತ್ತಿಕೊಂಡು ಪೌರುಷ ಮೆರೆದಿದ್ದು ಮತ್ತು ಮಹಿಳೆಯೊಬ್ಬಳು ಮಗುವೇನೋ ಎಂಬಂತೆ ಅದನ್ನು ಮುಟ್ಟಿದ್ದು!
ತಾನೇ ಧೈರ್ಯಸ್ಥ ಅಂತ ತೋರಿಸಿಕೊಳ್ಳುವ ಉಮೇದಿ ಇರುವವನಿಗೆ ಯಕಶ್ಚಿತ್ ಒಬ್ಬ ಮಹಿಳೆ ಹಾವನ್ನು ಮಗುವನ್ನು ಮುಟ್ಟುವ ಹಾಗೆ ಮುಟ್ಟಲು ಪ್ರಯತ್ನಿಸಿದರೆ, ಅವನ ಪೌರುಷಕ್ಕೆ ಅದು ಸವಾಲಾಗಲಾರದೇ?
ನಮಗೆ ಲಭ್ಯವಾಗುವ ವಿಡಿಯೊಗಳು ವೈವಿಧ್ಯಮಯ ಮಾರಾಯ್ರೇ. ಇಲ್ಲಿ ನೋಡಿ, ಹುಚ್ಚನ ಹಾಗೆ ಕಾಣುವ ವ್ಯಕ್ತಿಯೊಬ್ಬ ಕೊರಳಲ್ಲಿ ಜೀವಂತ ನಾಗರಹಾವೊಂದನ್ನು ಸುತ್ತಿಕೊಂಡು ಚಹಾದ ಅಂಗಡಿ ಮುಂದೆ ನಿಂತು ಟೀ ಕುಡಿಯುತ್ತಿದ್ದಾನೆ. ಅವನು ಹುಚ್ಚನಂತೆ ಕಾಣುತ್ತಾನೆಯೇ ಹೊರತು ಹುಚ್ಚನಲ್ಲ. ಮದ್ಯದ ನಷೆಯಲ್ಲೂ ಅವನಿಲ್ಲ ಅನಿಸುತ್ತದೆ. ತಾನು ಹಾವು ಹಿಡಿದಿರುವ ಪರಾಕ್ರಮವನ್ನಂತೂ ಅವನು ಮೆರೆಯುತ್ತಿದ್ದಾನೆ. ಆದರೆ, ವಿಡಿಯೋ ಆರಂಭದಲ್ಲಿ ಒಬ್ಬ ಮಹಿಳೆ ನಿಮಗೆ ಕಾಣಿಸುತ್ತಾಳೆ. ಆಕೆ ಇವನಿಗಿಂತ ಧೈರ್ಯಸ್ಥೆ ಇರಬೇಕು ಮಾರಾಯ್ರೇ. ಆಕೆ ಅಕ್ಷರಶಃ ಅದನ್ನು ಮುಟ್ಟಿನೋಡುವ ಪ್ರಯತ್ನ ಮಾಡುತ್ತಾಳೆ, ಕಿಂಚಿತ್ತೂ ಹೆದರಿಕೆ ಇಲ್ಲ ಆಕೆಗೆ! ಆದರೆ ಆಕೆಯ ಧೈರ್ಯ ಅವನಲ್ಲಿ ಕಸಿವಿಸಿಯನ್ನು ಉಂಟುಮಾಡುತ್ತದೆ. ತಾನೇ ಧೈರ್ಯಸ್ಥ ಅಂತ ತೋರಿಸಿಕೊಳ್ಳುವ ಉಮೇದಿ ಇರುವವನಿಗೆ ಯಕಶ್ಚಿತ್ ಒಬ್ಬ ಮಹಿಳೆ ಹಾವನ್ನು ಮಗುವನ್ನು ಮುಟ್ಟುವ ಹಾಗೆ ಮುಟ್ಟಲು ಪ್ರಯತ್ನಿಸಿದರೆ, ಅವನ ಪೌರುಷಕ್ಕೆ ಅದು ಸವಾಲಾಗಲಾರದೇ?
ಓಕೆ, ಈ ಘಟನೆ ನಡೆದಿರುವುದು ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮದಲ್ಲಿ. ಹಾವನ್ನು ಹಿಡಿದಿರುವ ವ್ಯಕ್ತಿ ಗಂಗವಾರ ಗ್ರಾಮದವನಂತೆ. ಯಾರದೋ ಮನೆ ಹತ್ತಿರ ಹಾವು ಹಿಡಿದಿರುವುದು ಮತ್ತು ಅವರು ಭಕ್ಷೀಸು ರೂಪದಲ್ಲಿ ರೂ. 500 ಕೊಟ್ಟರೆಂದು ಹೇಳುವುದು ಅಸ್ಪಷ್ಟವಾಗಿ ಕೇಳಿಸುತ್ತದೆ.
ಹಾವು ಹಿಡಿಯುವುದೇ ಅವನ ಕಾಯಕವಾಗಿದ್ದರೆ, ಒಬ್ಬ ವೃತ್ತಿಪರನ ಹಾಗೆ ಅವನು ನಡೆದುಕೊಳ್ಳುತ್ತಿಲ್ಲ. ಉರಗ ತಜ್ಞರು ಹಾವನ್ನು ಹಿಡಿದ ಕೂಡಲೇ ಅದನ್ನು ತೆಗೆದುಕೊಂಡು ಹೋಗಿ ಒಂದು ಸುರಕ್ಷಿತವಾದ ಸ್ಥಳಕ್ಕೆ ಅಂದರೆ ಒಂದು ಕಾಡು ಪ್ರದೇಶದಲ್ಲಿ ಬಿಡುತ್ತಾರೆ. ಆದರೆ, ಗಂಗವಾರದ ಈ ಗಂಡುಮಗ ತನ್ನ ಶೌರ್ಯದ ಪ್ರದರ್ಶನ ಮಾಡುತ್ತಾ ತಿರುಗುತ್ತಿದ್ದಾನೆ.
ಇದನ್ನೂ ಓದಿ: Shocking Video: ಪ್ಲಾಸ್ಟಿಕ್ ಮೊಸಳೆ ಎಂದು ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಆಗಿದ್ದೆ ಬೇರೆ! ಭಯಾನಕ ವಿಡಿಯೋ ನೋಡಿ