ಉಡುಪಿ: ದ್ವಿಚಕ್ರ ವಾಹನಕ್ಕೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವದಲ್ಲಿ ಅಮಾನವೀಯ ಘಟನೆ ನಡೆದಿದೆ. ಓರ್ವ ವ್ಯಕ್ತಿ ದ್ವಿಚಕ್ರ ವಾಹನಕ್ಕೆ ನಾಯಿ ಕಟ್ಟಿಕೊಂಡು ಎಳೆದೊಯ್ದಿದ್ದಾನೆ. ವ್ಯಕ್ತಿ ಶಿರ್ವ ಪೇಟೆಯಲ್ಲಿ ನಾಯಿಯ ಕೊರಳಿಗೆ ಸರಪಳಿ ಹಾಕಿ, ಸ್ಕೂಟರ್‌ನ ಸೀಟಿಗೆ ಸರಪಳಿ ಕಟ್ಟಿಕೊಂಡು ಸುಮಾರು ದೂರ ಎಳೆದೊಯ್ದು ವಿಕೃತಿ ಮೆರೆದಿದ್ದಾನೆ.
ಉಡುಪಿ (Udupi) ಜಿಲ್ಲೆಯ ಕಾಪು (Kapu) ತಾಲೂಕಿನ ಶಿರ್ವದಲ್ಲಿ ಅಮಾನವೀಯ ಘಟನೆ ನಡೆದಿದೆ. ಖಾದರ್ ಎಂಬುವರು ದ್ವಿಚಕ್ರ ವಾಹನಕ್ಕೆ ನಾಯಿ ಕಟ್ಟಿಕೊಂಡು ಎಳೆದೊಯ್ದಿದ್ದಾನೆ. ಕಾಪು ತಾಲೂಕಿನ ಕೊಂಬಗುಡ್ಡೆ ನಿವಾಸಿ ಖಾದರ್ ಸತ್ತು ಹೋಗಿದ್ದ ನಾಯಿಯನ್ನು ಸ್ಕೂಟಿಗೆ ಕಟ್ಟಿಕೊಂಡು ಕೊಂಬಗುಡ್ಡೆಯಿಂದ ಶಿರ್ವಪೇಟೆಯವರೆಗೆ ಸುಮಾರು 5 ಕಿಮೀ ಎಳೆದೊಯ್ದಿದ್ದಾನೆ. ನಾಯಿ ಎಳೆದೊಯ್ದ ವಿಡಿಯೋ ವೈರಲ್ ಬೆನ್ನಲ್ಲೇ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾದರ್ನ ಹೀನ ಕೃತ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Jul 20, 2024 10:27 AM