ಮಂಗಳೂರು: ಉಕ್ಕಿ ಹರಿಯುತ್ತಿರುವ ನೇತ್ರಾವತಿ ನದಿ ಪ್ರವಾಹದ ನೀರಿನಲ್ಲಿ ವ್ಯಕ್ತಿಯೊಬ್ಬನ ಹುಚ್ಚು ಸಾಹಸ

|

Updated on: Jul 19, 2024 | 11:58 AM

ಈಜಲು ಹರಿಯುವ ನೀರು ಆಗಬೇಕೆಂದೇನಿಲ್ಲ. ಮಂಗಳೂರು ಬೇಕಾದಷ್ಟು ಈಜುಕೊಳಗಳಿವೆ. ಬಂಟ್ವಾಳದಲ್ಲಿ ಬಾವಿಗಳಿವೆ, ನಿಂತ ನೀರಿನ ಹೊಂಡಗಳೂ ಇರಬಹುದು. ಹರಿವ ನೀರಲ್ಲಿ ಈಜುತ್ತಿರುವ ವ್ಯಕ್ತಿ ಹೀಗೆ ಅಪಾಯದ ಜೊತೆ ಸರಸವಾಡುವ ಬದಲು ಈ ಸ್ಥಳಗಳಿಗೆ ಹೋಗಿ ತನ್ನ ಈಜುವ ವಾಂಛೆಯನ್ನು ತೀರಿಸಿಕೊಳ್ಳುವುದು ಉತ್ತಮ ಆಪ್ಷನ್.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಟ್ಟಹಾಸ ನಿಲ್ಲುತ್ತಿಲ್ಲ. ಈ ಭಾಗದ ಪ್ರಮುಖ ನದಿ ನೇತ್ರಾವತಿ ಉಕ್ಕಿ ಹರಿಯುತ್ತಿದೆ. ನದಿಯ ನೀರು ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು, ಅಲಡ್ಕ ಪ್ರದೇಶ ಮತ್ತು ನಂದಾವರ ಭಾಗದಲ್ಲಿ ತೋಟಗಳಿಗೆ ಭಾರೀ ಪ್ರಮಾಣದಲ್ಲಿ ನುಗ್ಗಿದ ಕಾರಣ ಬೆಳೆಗಳೆಲ್ಲ ನಾಶವಾಗಿವೆ. ನಮ್ಮ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಅಲ್ಲಿನ ಅಡಕೆ ಮತ್ತು ಬಾಳೆ ತೋಟಗಳು ಪ್ರವಾಹದ ಅಬ್ಬರಕ್ಕೆ ನೆಲಕಚ್ಚಿವೆ. ಅದು ಸರಿ, ಪ್ರವಾಹದ ನೀರಲ್ಲಿ ಜೀವಿಯೊಂದು ಈಜುತ್ತಿರುವುದು ಇಲ್ಲಿ ಕಾಣುತ್ತಿದೆ. ಇಲ್ಲ, ಅದು ಬೇರೆ ಗ್ರಹದ ಜೀವಿಯೇನೂ ಅಲ್ಲ. ನಮ್ಮಂತೆ ಭೂನಿವಾಸಿಯೇ! ಸಂಶಯ ಹುಟ್ಟಲು ಕಾರಣವಿದೆ. ಜಲ, ಅಗ್ನಿ, ವಾಯು ಜೊತೆ ಭೂನಿವಾಸಿಗಳು ಚೆಲ್ಲಾಟ ಆಡಲ್ಲ. ಹಾಗೆ ಮಾಡಿದ್ದೇಯಾದಲ್ಲಿ ಅಪಾಯ ತಪ್ಪಿದ್ದಲ್ಲ. ನೇತ್ರಾವತಿ ನದಿಯಲ್ಲಿ ಪ್ರವಾಹದ ನೀರು ಹರಿದು ಬಂದಿದೆ ಮತ್ತು ಆ ನೀರಲ್ಲಿ ಈ ಪುಣ್ಯಾತ್ಮ ಈಜುತ್ತಿದ್ದಾರೆ. ನೀರಿನ ರಭಸ ಹೆಚ್ಚಿದರೆ ಅವರಿಗೆ ಅಪಾಯ ಎದುರಾಗಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆ, ಮಳೆಗಾಲ ಮುಗಿಯುವವರೆಗೆ ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ನಿಷೇಧ