Video: ರಿಸೆಪ್ಷನ್ ಟೇಬಲ್ ಮೇಲೆ ಪೂಜಾ ಬಟ್ಟಲಿನಲ್ಲಿದ್ದ ಹಣ ಕದ್ದ ಕಳ್ಳ, ಮೂರು ಜನ ಇದ್ರೂ ಗೊತ್ತೇ ಆಗ್ಲಿಲ್ಲ
ಬ್ಯೂಟಿ ಉತ್ಪನ್ನಗಳಿರುವ ಅಂಗಡಿಗೆ ಹೋಗಿ ರಿಸೆಪ್ಷನ್ ಟೇಬಲ್ ಮೇಲೆ ಇಟ್ಟಿದ್ದ ಪೂಜಾ ಬಟ್ಟಲಿನಿಂದ ಹಣವನ್ನು ಕದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರು ಅಂಗಡಿಗೆ ಹೋಗಿದ್ದಾರೆ. ಅದರಲ್ಲಿ ಒಬ್ಬರು ರಿಸೆಪ್ಷನಿಸ್ಟ್ ಬಳಿ ಮಾತನಾಡುತ್ತಿರುವಾಗ ಮತ್ತೊಬ್ಬ ಪೂಜಾ ಬಟ್ಟಲಿನಲ್ಲಿ ಇಟ್ಟಿದ್ದ ಹಣವನ್ನು ಕದ್ದಿದ್ದಾನೆ.

ಅಲ್ಲೇ ಸೆಕ್ಯುರಿಟಿ ನಿಂತಿದ್ದರೂ ಕೂಡ ಅವರಿಗೂ ಇದ್ಯಾವುದೂ ತಿಳಿಯಲಿಲ್ಲಈ ಪ್ರತಿಭೆಯನ್ನು ಅವರು ಒಳ್ಳೆಯ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದರೆ, ಭಾರತ ಇಂದು ಇನ್ನೂ ಉತ್ತಮ ಸ್ಥಿತಿಯಲ್ಲಿರುತ್ತಿತ್ತು ಎಂದು ಜನರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಗಾರ್ಡ್ ಮತ್ತು ಸಿಬ್ಬಂದಿಯ ಅಜಾಗರೂಕತೆಯನ್ನು ಪ್ರಶ್ನಿಸಿದ್ದಾರೆ. ಅವರ ಕಣ್ಣೆದುರಲ್ಲೇ ಕದ್ದರೂ ಗೊತ್ತಾಗಿಲ್ಲವೆಂದರೆ, ಭದ್ರತಾ ಸಿಬ್ಬಂದಿ ಇದ್ದೂ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ