‘ಪರಭಾಷೆ ಆಫರ್​ ಇದೆ, ಆದ್ರೆ ನನ್ನ ಆಲೋಚನೆ ಕನ್ನಡದ್ದು ಮಾತ್ರ’: ನಿರ್ದೇಶಕ ಸತ್ಯ ಪ್ರಕಾಶ್​

Edited By:

Updated on: Oct 12, 2021 | 4:44 PM

‘ಪ್ರತಿ ಭಾಷೆಗೂ ಒಂದು ಆತ್ಮ ಇರುತ್ತದೆ. ಅದರ ಏರಿಳಿತ ಗೊತ್ತಿರಬೇಕು. ಸದ್ಯದ ಮಟ್ಟಿಗೆ ನನಗೆ ಬರುತ್ತಿರುವ ಆಲೋಚನೆಗಳೆಲ್ಲ ಕನ್ನಡದ ಮಣ್ಣಿನದ್ದು’ ಎಂದು ಸತ್ಯ ಪ್ರಕಾಶ್​ ಹೇಳಿದ್ದಾರೆ.

‘ರಾಮಾ ರಾಮಾರೇ’ ಸಿನಿಮಾದಿಂದ ಭರ್ಜರಿ ಯಶಸ್ಸು ಪಡೆದ ನಿರ್ದೇಶಕ ಸತ್ಯ ಪ್ರಕಾಶ್​ ಈಗ ಪುನೀತ್​ ರಾಜ್​ಕುಮಾರ್​ ಅವರ ಬ್ಯಾನರ್​ನಲ್ಲಿ ‘ಮ್ಯಾನ್ ಆಫ್​ ದಿ ಮ್ಯಾಚ್​’ ಸಿನಿಮಾ ಮಾಡಿದ್ದಾರೆ. ಅವರಿಗೆ ಪರಭಾಷೆಯಿಂದಲೂ ಆಫರ್​ಗಳಿವೆ. ಹಾಗಿದ್ದರೂ ಕೂಡ ಅವರು ಕನ್ನಡದ ಸಿನಿಮಾಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಯಾಕೆ ಎಂಬುದನ್ನು ಅವರು ವಿವರಿಸಿದ್ದಾರೆ.

‘ತೆಲುಗು ಮತ್ತು ತಮಿಳಿನಿಂದ ನನಗೆ ಆಫರ್​ ಬಂದಿತ್ತು. ಆದರೆ ನನಗೆ ಕನ್ನಡ ಬಿಟ್ಟು ಬೇರೆ ಭಾಷೆಯ ಬಗ್ಗೆ ಹಿಡಿತ ಇಲ್ಲ. ಪ್ರತಿ ಭಾಷೆಗೂ ಒಂದು ಆತ್ಮ ಇರುತ್ತದೆ. ಅದರ ಏರಿಳಿತ ಗೊತ್ತಿರಬೇಕು. ಸದ್ಯದ ಮಟ್ಟಿಗೆ ನನಗೆ ಬರುತ್ತಿರುವ ಆಲೋಚನೆಗಳೆಲ್ಲ ಕನ್ನಡದ ಮಣ್ಣಿನದ್ದು. ಬೇರೆ ಭಾಷೆಯಲ್ಲಿ ಕೆಲಸ ಮಾಡುವ ಬಗ್ಗೆ ಸದ್ಯಕ್ಕೆ ಆಲೋಚನೆ ಇಲ್ಲ. ಮುಂದಿನದ್ದು ಗೊತ್ತಿಲ್ಲ’ ಎಂದು ಸತ್ಯ ಪ್ರಕಾಶ್​ ಹೇಳಿದ್ದಾರೆ.

ಇದನ್ನೂ ಓದಿ:

ಶಿವಣ್ಣನಿಗೆ ಅಪ್ಪು ನಿರ್ದೇಶನ, ಉಪ್ಪಿ ಅಸಿಸ್ಟೆಂಟ್​​ ಡೈರೆಕ್ಟರ್​, ಸಂತೋಷ್​ ಆನಂದ್​ರಾಮ್​ ಡೈಲಾಗ್​ ರೈಟರ್

‘ಚರಂಡಿ ಕ್ಲೀನ್​ ಮಾಡುವವನ ಪಾತ್ರ ಮಾಡ್ತೀನಿ’: ದುನಿಯಾ ವಿಜಯ್​ ನಿರ್ದೇಶನದಲ್ಲಿ ಶಿವಣ್ಣನಿಗೆ ನಟಿಸುವ ಆಸೆ