ಸಿದ್ದರಾಮಯ್ಯಗೆ ಹಾರ ಹಾಕುವಾಗ ಪಿಸ್ಟಲ್ ಇಟ್ಟುಕೊಂಡಿದ್ದ ರಿಯಾಜ್ನನ್ನು ಬಲ್ಲೆ, ಅವನು ರೌಡಿಯಲ್ಲ: ಆರ್ ವಿ ದೇವರಾಜ್, ಮಾಜಿ ಶಾಸಕ
ರಿಯಾಜ್ ಕಳೆದ 20 ವರ್ಷಗಳಿಂದ ತನಗೆ ಗೊತ್ತು, ಅವನು ಕೆಟ್ಟ ವ್ಯಕ್ತಿಯೇನೂ ಅಲ್ಲಿ, ಕೋರೋನಾ ಸಂದರ್ಭದಲ್ಲಿ ಬಹಲ ಜನರಿಗೆ ಸಹಾಯ ಮಾಡಿದ್ದಾನೆ, ಚುನಾವಣೆ ಸಮಯದಲ್ಲೂ ಗನ್ ಇಟ್ಟುಕೊಂಡು ತಿರುಗಾಡಲು ವಿಶೇಷ ಅನುಮತಿ ಪಡೆದುಕೊಂಡಿದ್ದಾನೆ ಎಂದು ದೇವರಾಜ್ ಹೇಳುತ್ತಾರೆ.
ಬೆಂಗಳೂರು: ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಪ್ರಚಾರ ಮಾಡುವಾಗ ಭಾರೀ ಪ್ರಮಾಣದ ಭದ್ರತಾ ಲೋಪ (security lapse) ಜರುಗಿದ್ದನ್ನು ಈಗಾಗಲೇ ವರದಿ ಮಾಡಿದ್ದೇವೆ. ಪಿಸ್ಟಲ್ ಇಟ್ಟುಕೊಂಡಿದ್ದ ರಿಯಾಜ್ (Riyaz) ಹೆಸರಿನ ವ್ಯಕ್ತಿಯೊಬ್ಬ ಸಿದ್ದರಾಮಯ್ಯ ಇದ್ದ ತೆರೆದ ವಾಹನ ಹತ್ತಿ ಅವರಿಗೆ ಹೂಮಾಲೆ ಹಾಕಿದ್ದ. ಪೊಲೀಸರು ಇಂದು ಬೆಳಗಿನ ಜಾವ ಮೂರುಗಂಟೆಯವರೆ ಅವನ ವಿಚಾರಣೆ ನಡೆಸಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಶಾಸಕ ಆರ್ ವಿ ದೇವರಾಜ್ (RV Devaraj) ಟಿವಿ9 ವರದಿಗಾರನೊಂದಿಗೆ ಮಾತಾಡಿದ್ದು ರಿಯಾಜ್ ಕೇವಲ ತನ್ನ ಅತ್ಮರಕ್ಷಣೆಗಾಗಿ ಲೈಸೆನ್ಸ್ ಉಳ್ಳ ಪಿಸ್ಟಲ್ ಇಟ್ಟುಕೊಂಡಿದ್ದಾನೆ, ಮೂರು ವರ್ಷಗಳ ಹಿಂದೆ ಅವನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಬಳಿಕ ಪಿಸ್ಟಲ್ ಇಟ್ಟುಕೊಳ್ಳುವ ಪರವಾನಗಿ ಅವನು ಪಡೆದುಕೊಂಡಿದ್ದ ಎನ್ನುತ್ತಾರೆ. ರಿಯಾಜ್ ಕಳೆದ 20 ವರ್ಷಗಳಿಂದ ತನಗೆ ಗೊತ್ತು, ಅವನು ಕೆಟ್ಟ ವ್ಯಕ್ತಿಯೇನೂ ಅಲ್ಲಿ, ಕೋರೋನಾ ಸಂದರ್ಭದಲ್ಲಿ ಬಹಲ ಜನರಿಗೆ ಸಹಾಯ ಮಾಡಿದ್ದಾನೆ, ಚುನಾವಣೆ ಸಮಯದಲ್ಲೂ ಗನ್ ಇಟ್ಟುಕೊಂಡು ತಿರುಗಾಡಲು ವಿಶೇಷ ಅನುಮತಿ ಪಡೆದುಕೊಂಡಿದ್ದಾನೆ ಎಂದು ದೇವರಾಜ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು ದಕ್ಷಿಣ ಅಭ್ಯರ್ಥಿ ಸೌಮ್ಯ ರೆಡ್ಡಿಗಾಗಿ ಸಿಎಂ ಸಿದ್ದರಾಮಯ್ಯ ರವಿವಾರ ತಡರಾತ್ರಿ ರೋಡ್ ಶೋ