ಮರೆಯಲ್ಲಿ ನಿಂತು ಪ್ರಧಾನಿಯವರ ಫೋಟೋ ತೆಗೆಯಲು ಪ್ರಯತ್ನಿಸಿದ ವ್ಯಕ್ತಿ ಕಮಾಂಡೋಗಳ ಕಣ್ಣಿಗೆ ಬೀಳದೇ ಹೋಗಿದ್ದು ಅದೃಷ್ಟವೇ ಸರಿ!

ಮರೆಯಲ್ಲಿ ನಿಂತು ಪ್ರಧಾನಿಯವರ ಫೋಟೋ ತೆಗೆಯಲು ಪ್ರಯತ್ನಿಸಿದ ವ್ಯಕ್ತಿ ಕಮಾಂಡೋಗಳ ಕಣ್ಣಿಗೆ ಬೀಳದೇ ಹೋಗಿದ್ದು ಅದೃಷ್ಟವೇ ಸರಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jun 20, 2022 | 3:59 PM

ಆದರೆ ಮರೆಯಲ್ಲಿ ಈ ವ್ಯಕ್ತಿ ನಿಂತು ಫೋಟೋ ತೆಗೆಯುತ್ತಿರುವುದು ಕಮಾಂಡೋಗಳ ಕಣ್ಣಿಗೇನಾದರೂ ಬಿದ್ದಿದ್ದರೆ ಉಗ್ರನಿರಬಹುದು ಅಂತ ಶಂಕಿಸಿ ಅವರು ಗುಂಡು ಹಾರಿಸಲೂ ಹಿಂಜರಿಯುತ್ತಿರಲಿಲ್ಲ.

ಬೆಂಗಳೂರಿನ ಯಲಹಂಕ ವಾಯುನೆಲೆ ನಿಲ್ದಾಣದಲ್ಲಿ (Yelahanka Airbase) ಬಂದಿಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಫೋಟೋಗಳನ್ನು ದೂರದ ಒಂದು ಮರೆಯಲ್ಲಿ ನಿಂತು ಕ್ಲಿಕ್ಕಿಸಿಕೊಳ್ಳುತ್ತಿರುವ ಈ ವ್ಯಕ್ತಿ ನಿಸ್ಸಂದೇಹವಾಗಿ ಅವರು ಅಪ್ಪಟ ಅಭಿಮಾನಿಯೇ. ಅದರೆ ಬಹಳ ಅಪಾಯಕಾರಿ ಕೆಲಸಕ್ಕೆ ಆತ ಕೈ ಹಾಕಿದ್ದಾನೆ. ಆತನಿಗೆ ಮುಂದೆ ಅಂದರೆ ಪ್ರಧಾನಿಗಳ ಹತ್ತಿರಕ್ಕೆ ಹೋಗಲು ಭದ್ರತಾ ದಳ, ಕಮಾಂಡೋಗಳು (commandoes) ಮತ್ತು ಪೊಲೀಸರು ಬಿಡಲಾರರು. ಆದರೆ ಮರೆಯಲ್ಲಿ ಈ ವ್ಯಕ್ತಿ ನಿಂತು ಫೋಟೋ ತೆಗೆಯುತ್ತಿರುವುದು ಕಮಾಂಡೋಗಳ ಕಣ್ಣಿಗೇನಾದರೂ ಬಿದ್ದಿದ್ದರೆ ಉಗ್ರನಿರಬಹುದು ಅಂತ ಶಂಕಿಸಿ ಅವರು ಗುಂಡು ಹಾರಿಸಲೂ ಹಿಂಜರಿಯುತ್ತಿರಲಿಲ್ಲ. ಹಾಗಾಗೇ ಇದೊಂದು ಹುಚ್ಚು ಮತ್ತು ಅಪಾಯಕಾರಿ ಸಾಹಸ ಅಂತ ನಾವು ಹೇಳುತ್ತಿರೋದು. ಕಮಾಂಡೋಗಳ ಕಣ್ಣಿಗೆ ಬೀಳದಿರುವುದು ಆತನ ಅದೃಷ್ಟವೇ!

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published on: Jun 20, 2022 03:54 PM