ಮಹಿಳಾ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆದಿರುವುದನ್ನು ಅಂಗೀಕರಿಸುವ ಕೊಪ್ಪಳ ಎಂವಿ ಕಂಪನಿ ಮ್ಯಾನೇಜರ್

Updated on: Jul 19, 2025 | 6:17 PM

ತಮ್ಮ ಸ್ವಂತ ಅಕ್ಕ ತಂಗಿಯರ ವಿರುದ್ಧ ಏರು ಧ್ವನಿಯಲ್ಲಿ ಮಾತಾಡದ ಇವತ್ತಿನ ಜಮಾನಾದಲ್ಲಿ ಬಸವರಾಜ ಆಸಂಗಿ ಮತ್ತು ಲಕ್ಷ್ಮಿ ಎನ್ನುವವರು ಬೇರೆ ಮನೆ ಯುವತಿಯೊಬ್ಬಳ ಮೇಲೆ ಹಲ್ಲೆ ನಡೆಸುತ್ತಾರೆಂದರೆ ಅವರು ಮಾನಸಿಕ ವಿಕೃತಿಯಿಂದ ಬಳಲುತ್ತಿರಬಹುದು. ಹಲ್ಲೆಗೊಳಗಾದ ಯುವತಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಮ್ಯಾನೇಜರ್ ಭರವಸೆ ನೀಡುತ್ತಾರೆ.

ಕೊಪ್ಪಳ, ಜುಲೈ 19: ಡೈರೆಕ್ಟ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಕಂಪನಿಗಳ (direct sales and marketing company) ಹೆಸರು ನೀವು ಕೇಳಿರುತ್ತೀರಿ, ಇಂಥ ಕಂಪನಿಗಳಲ್ಲಿ ಉದ್ಯೋಗಿಗಳ ಶೋಷಣೆ ನಡೆಯುತ್ತದೆ, ತಿಂಗಳುಗಟ್ಟಲೆ ಓಣಿ-ಬೀದಿಗಳಲ್ಲಿ ಅನ್ನ ನೀರಿಲ್ಲದೆ ಸುತ್ತುವವರಿಗೆ ಸಂಬಳ ಸಿಗಲ್ಲ, ಆದರೆ ಕೊಪ್ಪಳದ ಎಂವಿ ಮಾರ್ಕೆಟಿಂಗ್ ಕಂಪನಿ ಅಂಥದಲ್ಲ ಅಂತ ಅದರ ಮ್ಯಾನೇಜರ್ ಮುತ್ತಣ್ಣ ಹೇಳುತ್ತಾರೆ. ಈ ಕಂಪನಿಯಲ್ಲಿ ನಡೆದಿದ್ದೇನೆಂದರೆ ಬಸವರಾಜ ಆಸಂಗಿ ಮತ್ತು ಲಕ್ಷ್ಮಿ ಹೆಸರಿನ ಇಬ್ಬರು ಡಿಸ್ಟ್ರಿಬ್ಯೂಟರ್ ಗಳು ತಮ್ಮಂತೆಯೇ ಸಂಸ್ಥೆಯಲ್ಲಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುವ ಒಬ್ಬ ಯುವತಿಯ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ. ಆಕೆಗೆ ಹೊಡೆದಿರುವುದನ್ನು ಮ್ಯಾನೇಜರ್ ಅಂಗೀಕರಿಸುತ್ತಾರೆ. ಹಲ್ಲೆಗೊಳಗಾದ ಯುವತಿ ಮತ್ತು ಅವರ ತಾಯಿ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿರುವುದರಿಂದ ಮುತ್ತಣ್ಣನನ್ನು ವಿಚಾರಣೆಗೆ ಕರೆಸಲಾಗಿದೆ.

ಇದನ್ನೂ ಓದಿ:  ಕ್ಯಾಬ್ ಚಾಲಕನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ ಯುವತಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ