ಲಾಠಿ ಹಿಡಿದು ಜನರ ರಕ್ಷಣೆಗೆ ಸಜ್ಜಾದ ಕೊಪ್ಪಳದ ಮಂಗಳಮುಖಿ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ತೊಂಡಿಹಾಳ ಗ್ರಾಮದ ಮಂಗಳಮುಖಿ ಮಧುಶ್ರೀ ಅವರು ಪೊಲೀಸ್ ಪೇದೆಯಾಗಿ ಆಯ್ಕೆಯಾಗಿದ್ದಾರೆ. ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಇದು ಇತರೆ ಮಂಗಳಮುಖಿಯರಿಗೆ ಸ್ಪೂರ್ತಿಯಾಗಿದ್ದಾರೆ. ಸರ್ಕಾರ ಎಲ್ಲಾ ಇಲಾಖೆಗಳಲ್ಲಿಯೂ ಈ ರೀತಿಯ ಮೀಸಲಾತಿ ನೀಡಲು ಎಂದು ಹೇಳಿದ್ದಾರೆ.

ಲಾಠಿ ಹಿಡಿದು ಜನರ ರಕ್ಷಣೆಗೆ ಸಜ್ಜಾದ ಕೊಪ್ಪಳದ ಮಂಗಳಮುಖಿ
ಲಾಠಿ ಹಿಡಿದು ಜನರ ರಕ್ಷಣೆಗೆ ಸಜ್ಜಾದ ಕೊಪ್ಪಳದ ಮಂಗಳಮುಖಿ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 29, 2024 | 4:28 PM

ಕೊಪ್ಪಳ, ಅಕ್ಟೋಬರ್​ 29: ಸ್ವಾವಲಂಬಿಗಳಾಗಿ ಛಲದಿಂದ ಬದುಕುಕಟ್ಟಿಕೊಂಡಿರುವ ಸಾಕಷ್ಟು ಮಂಗಳಮುಖಿಯರನ್ನು ನಾವು ನೋಡಿದ್ದೇವೆ. ಯಾವುದೇ ರೀತಿಯ ತಪ್ಪು ದಾರಿ ತುಳಿಯದೇ ಮಾದರಿಯಾಗಿರುವ ಮಂಗಳಮುಖಿಯರು (transgender) ನಮ್ಮ ನಡುವೆಯೇ ಇದ್ದಾರೆ. ಇದೀಗ ಇವರ ಸಾಲಿಗೆ ಕೊಪ್ಪಳದ ಮಂಗಳಮುಖಿ ಒಬ್ಬರು ಸೇರ್ಪಡೆ ಆಗುತ್ತಾರೆ.

ಪೊಲೀಸ್ ಇಲಾಖೆಯಲ್ಲಿ ಇನ್ಮುಂದೆ ಮಂಗಳಮುಖಿರ ಹವಾ

ಹೌದು.. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ತೊಂಡಿಹಾಳ ಗ್ರಾಮದ ಮಂಗಳಮುಖಿ ಮಧುಶ್ರೀ ಅವರು ಪೊಲೀಸ್ ಪೇದೆಯಾಗಿ ಆಯ್ಕೆಯಾಗಿದ್ದಾರೆ. ಕೆಲವೇ ದಿನಗಳಲ್ಲಿ ಕೈಯಲ್ಲಿ ಲಾಠಿ ಹಿಡಿದು ಜನರ ರಕ್ಷಣೆ ಮಾಡಲಿದ್ದಾರೆ. ಆ ಮೂಲಕ ಪೊಲೀಸ್ ಇಲಾಖೆಯಲ್ಲಿ ಇನ್ಮುಂದೆ ಮಂಗಳಮುಖಿರ ಹವಾ ಕಾಣಬಹುದಾಗಿದೆ.

ಇದನ್ನೂ ಓದಿ: ವಿಜಯಪುರ: ಮಂಗಳಮುಖಿಯರಿಂದ ಯುವತಿ ಮೇಲೆ ಹಲ್ಲೆ ಪ್ರಕರಣ; ಐವರು ಅರೆಸ್ಟ್

ರಾಜ್ಯದ ಸರ್ಕಾರ ಮಂಗಳಮುಖಿಯರಿಗೆ ಶೇಕಡ 1% ರಷ್ಟು ಮೀಸಲಾತಿ ಕಲ್ಪಿಸಿದೆ. ಹೀಗಾಗಿ ಮಂಗಳಮುಖಿ ಮಧುಶ್ರೀ ಅವರು ಕಠಿಣ ಪರಿಶ್ರಮದಿಂದ ಓದಿ ಪೋಲಿಸ್ ಪೇದೆಯಾಗಿ ನೇಮಕಗೊಂಡಿರುವುದು ಇತರೆ ಮಂಗಳಮುಖಿಯರಿಗೆ ಮಾದರಿಯಾಗಿದ್ದಾರೆ.

ಮಂಗಳಮುಖಿ ಮಧುಶ್ರೀ ಅವರು ಸದ್ಯ ಲಿಖಿತ ಮತ್ತು ದೈಹಿಕ ಪರೀಕ್ಷೆಯಲ್ಲಿ ಕೂಡ ಪಾಸ್ ಆಗಿದ್ದು, ಅಂತಿಮ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಆ ಮೂಲಕ ರಾಜ್ಯದ ಪೊಲೀಸ್ ಇಲಾಖೆಯ ಸೇವೆಗೆ ಸಿದ್ದವಾಗಿದ್ದಾರೆ. ಮಾರುತಿ ಅಲಿಯಾಸ್ ಮಧುಶ್ರೀಯ ಈ ವಿಶಿಷ್ಟ ಸಾಧನೆ ಕಂಡು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಮಂಗಳಮುಖಿಯರಿಗೆ ಅನುಕೂಲ ಕಲ್ಪಿಸಲಿ: ಮಧುಶ್ರೀ 

ಈ ಬಗ್ಗೆ ಸ್ವತಃ ಮಂಗಳಮುಖಿ ಮಧುಶ್ರೀ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ತುಂಬಾ ಖುಷಿಯಾಗಿದೆ. ನಾವು ಅವಕಾಶಕ್ಕಾಗಿ ಕಾಯುತ್ತಿದ್ದೆ. ಯಾವಾಗ ನೋಟಿಪಿಕೇಶನ್​ ಬಂತೋ ತಕ್ಷಣ ಅರ್ಜಿ ಸಲ್ಲಿಸಿದೆ. ಬಳಿಕ ಓದುವುದಕ್ಕೆ ಆರಂಭಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಜಯಪುರ: ಮಂಗಳಮುಖಿಯನ್ನು ಬೆತ್ತಲೆಗೊಳಿಸಿ, ಮರ್ಮಾಂಗಕ್ಕೆ ಖಾರದ ಪುಡಿ ಎರಚಿ ಹಲ್ಲೆ

ಒಂದು ತಿಂಗಳು ಕೋಚಿಂಗ್​ ಮತ್ತು ಆನ್​ಲೈನ್​ ಕ್ಲಾಸ್​ ಮೂಲಕ ಮನೆಯಲ್ಲಿ ಓದಿದೆ. ಕುಟುಂಬ ಮತ್ತು ನಮ್ಮ ಸಮುದಾಯದಿಂದ ಸಾಕಷ್ಟು ಸಹಕಾರ ನೀಡಿದ್ದಾರೆ. ಸರ್ಕಾರ ಎಲ್ಲಾ ಇಲಾಖೆಗಳಲ್ಲೂ ಇದೇ ರೀತಿ ಮೀಸಲಾತಿ ನೀಡಿ ಮಂಗಳಮುಖಿಯರಿಗೆ ಅನುಕೂಲ ಕಲ್ಪಿಸಲಿ ಎಂದು ಮಧುಶ್ರೀ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ
ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು
ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು