AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಕ್ಫ್​ ವಿವಾದ: ಬಿಜೆಪಿ ತಂಡದ ಮುಂದೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ವಿಜಯಪುರ ಜಿಲ್ಲಾಧಿಕಾರಿ

ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ತೀವ್ರಗೊಂಡಿದ್ದು, ಸಂಸದ ಗೋವಿಂದ ಕಾರಜೋಳ ನೇತೃತ್ವದ ತಂಡ ರೈತರ ಅಹವಾಲು ಆಲಿಸಿದ್ದು, ದಾಖಲೆಗಳೊಂದಿಗೆ ಡಿಸಿ ಟಿ ಭೂಬಾಲನ್ ಭೇಟಿ ಮಾಡಿದೆ. ಈ ವೇಳೆ ಬಿಜೆಪಿ ತಂಡದ ಪ್ರಶ್ನೆಗೆ ಜಿಲ್ಲಾಧಿಕಾರಿ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ.  

ವಕ್ಫ್​ ವಿವಾದ: ಬಿಜೆಪಿ ತಂಡದ ಮುಂದೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ವಿಜಯಪುರ ಜಿಲ್ಲಾಧಿಕಾರಿ
ವಕ್ಫ್​ ವಿವಾದ: ಬಿಜೆಪಿ ತಂಡದ ಮುಂದೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ವಿಜಯಪುರ ಜಿಲ್ಲಾಧಿಕಾರಿ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on:Oct 29, 2024 | 6:15 PM

Share

ವಿಜಯಪುರ, ಅಕ್ಟೋಬರ್​ 29: ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ (waqf Land Dispute) ತೀವ್ರ ಸ್ವರೂಪ ಪಡೆದುಕೊಂಡಿದೆ. ವಾದ ಪ್ರತಿವಾದಕ್ಕೂ ಕಾರಣವಾಗುತ್ತಿದೆ. ಇದರ ಬೆನ್ನಲ್ಲೇ ಇಂದು ನಗರಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿದೆ. ಸಿಂದಗಿ, ಪಡಗಾನೂರು, ಹಡಗಲಿ ಗ್ರಾಮಗಳಲ್ಲಿ ರೈತರ ಅಹವಾಲು ಆಲಿಸಿರುವ ಬಿಜೆಪಿ ತಂಡ ದಾಖಲೆ, ಮಾಹಿತಿಗಳನ್ನ ಸಂಗ್ರಹಿಸಿಕೊಂಡಿದೆ. ಸದ್ಯ ಎಲ್ಲ ಮಾಹಿತಿ ಸಂಗ್ರಹಿಸಿಕೊಂಡಿರುವ ಸಂಸದ ಗೋವಿಂದ ಕಾರಜೋಳ ನೇತೃತ್ವದ ತಂಡ ಡಿಸಿ ಟಿ ಭೂಬಾಲನ್ ಭೇಟಿ ಮಾಡಿದ್ದಾರೆ.

ಡಿಸಿ ಭೇಟಿಯಾದ ಬಿಜೆಪಿ ಮುಖಂಡರ ನಿಯೋಗ

ಡಿಸಿ ಟಿ ಭೂಬಾಲನ್ ಭೇಟಿ ಮಾಡಿದ ಸಂಸದ ಗೋವಿಂದ ಕಾರಜೋಳ ವಕ್ಫ ಸಚಿವ ಜಮೀರ್ ಅಹ್ಮದ್ ಖಾನ್​ ನಡೆಸಿದ ಸಭೆಯ ಪ್ರೊಸೀಡಿಂಗ್ಸ್ ಕಾಪಿ ಕೇಳಿದ್ದಾರೆ. ನೋಟಿಸ್ ಕೊಡದೆ ಪಹಣಿಯಲ್ಲಿ ವಕ್ಫ್ ಹೆಸರು ಎಂಟ್ರಿ ಮಾಡಿದು ಏಕೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವಕ್ಫ್ ಆಸ್ತಿ ನೋಂದಣಿ ವಿವಾದ: ಬಿಜೆಪಿ ಪರಿಶೀಲನಾ ತಂಡ ಪುನಾರಚನೆ, ಯತ್ನಾಳ್​ಗೆ ಸ್ಥಾನ

ನಾವು ಇಂಡಿ, ಚಡಚಣದಲ್ಲಿ ಮಾತ್ರ 44 ರೈತರ ಜಮೀನಿನಲ್ಲಿ ಇಂದೀಕರಣ ಮಾಡಿದ್ದೇವೆ. ಕೊಟ್ಟ ನೋಟಿಸ್ ಈಗಾಗಲೇ ರದ್ದುಗೊಳಿಸಿದ್ದೇವೆ ಎಂದು ಡಿಸಿ ಟಿ ಭೂಬಾಲನ್​ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಡಿಸಿ ಜತೆ ಬಿಜೆಪಿ ನಿಯೋಗದ ವಕೀಲ ಎಂ.ಬಿ.ಜಿರಲಿ ವಾಗ್ವಾದ ಉಂಟಾಗಿದೆ.

ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಜಿಲ್ಲಾಧಿಕಾರಿ 

ವಕ್ಫ್​​ ಆಸ್ತಿಗಳ ಇಂದೀಕರಣ ಮೊದಲಿನಿಂದಲೂ ಮಾಡುತ್ತ ಬಂದಿದ್ದಾರೆ. ಹಿಂದಿನಂತೆಯೆ ಈಗ ನಾವು ಇಂದೀಕರಣ ಮಾಡಿದ್ದೇವೆ ಎಂದು ಬಿಜೆಪಿ ಟೀಂ ಎದುರು ಡಿಸಿ ಸ್ಪಷ್ಟನೆ ನೀಡಿದರು. 2018-19ರಲ್ಲೂ ವಕ್ಫ್ 123 ಆಸ್ತಿಗಳ ಇಂದೀಕರಣ ಆಗಿವೆ. 112 ರೈತರ ಜಮೀನುಗಳಿಗೆ ನೋಟಿಸ್ ನೀಡಲಾಗಿದೆ. ಪ್ರತಿವರ್ಷ ಇಂದೀಕರಣ, ನೋಟಿಸ್ ಪ್ರಕ್ರಿಯೆ ಆಗುತ್ತಿದೆ. 2020-21ರಲ್ಲಿ 138 ರೈತರಿಗೆ ನೋಟಿಸ್ ನೀಡದೇ ಇಂದೀಕರಣ ವಕ್ಫ್​​ ಹೆಸರು ಸೇರ್ಪಡೆಯಾಗಿದೆ ಎಂದು ಜಿಲ್ಲಾಧಿಕಾರಿ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ.

2020-21ರಲ್ಲೂ ನೋಟಿಸ್ ನೀಡದೆ ಸಾಕಷ್ಟು ರೈತರ ಜಮೀನು ಪಹಣಿಯಲ್ಲಿ ವಕ್ಫ್​ ಹೆಸರು ಉಲ್ಲೇಖಿಸಿದ್ದು, ಇದು ಕಾನೂನು ಪ್ರಕ್ರಿಯೆ. ಇನ್ಮುಂದೆ ನೋಟಿಸ್ ಇಲ್ಲ, ಕಾಲಂ 11 ಹೆಸರು ಸೇರ್ಪಡೆ ಮಾಡಲ್ಲ. ಈಗ ಮಾಡಿರೋದನ್ನ ವಾಪಸ್ ಪಡೆಯುತ್ತೇವೆ, ಆದರೆ ಈ ಹಿಂದೆ ಆಗಿರುವ ಮ್ಯೂಟೇಷನ್ ಕುರಿತು ಸರ್ಕಾರದಿಂದ ಸಲಹೆ ಪಡೆದು ಮುಂದಿನ ಕಾರ್ಯ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ವಕ್ಫ್​ ವಿವಾದ: ಬಿಜೆಪಿ ಅವಧಿಯಲ್ಲೂ ರೈತರಿಗೆ ನೋಟಿಸ್​, ದಾಖಲೆ ಸಮೇತ ಗುಡುಗಿದ ಎಂಬಿ ಪಾಟೀಲ್​

ವಿಜಯಪುರ ನಗರದ ಸರ್ವೆ ನಂಬರ್ 811 ಪಿಡಬ್ಲ್ಯೂಡಿ ಆಸ್ತಿ ವಕ್ಫ್ ಪಾಲಾಗಿದೆ. ಈ ಕುರಿತು ವಕ್ಫ್ ಅಧಿಕಾರಿ, ಡಿಸಿಗೆ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದು, ಪಿಡಬ್ಲ್ಯೂಡಿಯ ಇಷ್ಟು ದೊಡ್ಡ ಆಸ್ತಿ ಹೇಗೆ ವಕ್ಫ್​ಗೆ ಸೇರಿತ್ತು? ಇದರಲ್ಲಿ ಅಧಿಕಾರಿಗಳಿಗಿಂತ ಸಚಿವ ಜಮೀರ್ ಅಹ್ಮದ್ ಖಾನ್ ತಪ್ಪೇ ಎದ್ದು‌ ಕಾಣುತ್ತಿದೆ ಎಂದು ಬಿಜೆಪಿ ತಂಡ ಆರೋಪಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:14 pm, Tue, 29 October 24