ಚಿಕ್ಕ ವಯಸ್ಸಿನಲ್ಲೇ ಮಂಗಳಮುಖಿಯರ ಸ್ನೇಹ ಬೆಳೆಸಿದ್ದ ಯುವಕ ಏಕಾಏಕಿ ಆತ್ಮಹತ್ಯೆಗೆ ಶರಣು!
ಸಣ್ಣ ವಯಸ್ಸಿನಲ್ಲೇ ಮಂಗಳಮುಖಿಯರ ಸ್ನೇಹ ಬೆಳೆಸಿದ್ದ 17 ವರ್ಷದ ಯುವಕ ದಿಢೀರ್ ಮನೆಯಿಂದ ನಾಪತ್ತೆಯಾಗಿದ್ದ. ಸುಮಾರು ನಾಲ್ಕು ತಿಂಗಳ ಬಳಿಕ ತಾನೇ ತಮ್ಮ ದೊಡ್ಡಮ್ಮನ ಮನೆಗೆ ವಾಪಸ್ ಬಂದಿದ್ದ. ಆದ್ರೆ, ಮಂಗಳಮುಖಿಯರು ಸಹ ಯುವಕನ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಇದರಿಂದ ಯವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೈಸೂರು (ಜೂ.24): ಮಂಗಳಮುಖಿಯರು( transgender) ಗುಂಪಾಗಿ ಮನೆಗೆ ಬಂದು ಗಲಾಟೆ ಮಾಡಿದ್ದರಿಂದ ಮನನೊಂದು ಬಾಲಕನೋರ್ವ ಮನನೊಂದು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಮೈಸೂರು (Mysuru) ಜಿಲ್ಲೆಯ ಹುಣಸೂರು ತಾಲೂಕಿನ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ. ರಾಹುಲ್ ಮೌರ್ಯ (17) ಮೃತದುರ್ದೈವಿ. ಮೃತ ರಾಹುಲ್, ಮಂಗಳಮುಖಿ ಜೊತೆ ಸ್ನೇಹ ಬೆಳೆಸಿದ್ದ. ಆದ್ರೆ, ಅದೇನಾಯ್ತೋ ಏನೋ ಮಂಗಳಮುಖಿಯರು, ರಾಹುಲ್ ಮನೆಗೆ ಬಂದು ಆತನ ಕುಟುಂಬಸ್ಥರ ಜೊತೆ ಗಲಾಟೆ ಮಾಡಿದ್ದಾರೆ. ಇದರಿಂದ ಮನನೊಂದು ರಾಹುಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಮಂಗಳಮುಖಿ ಜೊತೆ ಸ್ನೇಹ ಬೆಳೆಸಿದ್ದ ರಾಹುಲ್, ಅದೇನಾಗಿತ್ತೋ ಏನೋ ಏಕಾಏಕಿ ನಾಲ್ಕು ತಿಂಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ. ಬಳಿಕ ಮೊನ್ನೆ ಜೂನ್ 21 ರಂದು ತಾನೇ ದೊಡ್ಡಮ್ಮನ ಮನೆಗೆ ಹಿಂದಿರುಗಿದ್ದ. ಆದರೆ, ನಿನ್ನೆ(ಜೂನ್ 23) ಕೆಲವು ಮಂಗಳಮುಖಿಯರು ರಾಹುಲ್ ಮೌರ್ಯ ಕುಟುಂಬಸ್ಥರ ಜೊತೆ ಗಲಾಟೆ ಮಾಡಿದ್ದಾರೆ. ನೀವು ನಿಮ್ಮ ಹುಡುಗನನ್ನು ನಮ್ಮೊಂದಿಗೆ ಕಳಿಸಿಕೊಡಿ ಎಂದು ಗಲಾಟೆ ಮಾಡಿದ್ದರು. ಜೊತೆಗೆ, ನಿಮ್ಮ ಮಗನೇ ನಮ್ಮ ಹುಡುಗಿಯನ್ನು ಕರೆದೊಯ್ದಿದ್ದಾನೆಂದು ಆರೋಪಿಸಿ ಮಂಗಳಮುಖಿಯರು ಊರಿನಲ್ಲಿ ಬಂದು ಜೋರಾಗಿ ಗಲಾಟೆಯನ್ನೂ ಮಾಡಿದ್ದರು. ಇದರಿಂದ ಮನನೊಂದ ರಾಹುಲ್ ಅಂದು ಸಂಜೆಯೇ ಜಮೀನಿನಲ್ಲಿರುವ ಶೆಡ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಸೆಲ್ಫಿ ಕ್ರೇಜ್‌ಗೆ ಯುವಕ ಬಲಿ: ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಅಬ್ಬಿ ಫಾಲ್ಸ್ ಪಾಲಾದ
ಇನ್ನು ಘಟನೆ ಬಗ್ಗೆ ಸೂಕ್ತ ತೆನಿಖೆ ನಡೆಸುವಂತೆ ತಂದೆ ಕುಮಾರ್ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ರಾಹುಲ್ ಮೌರ್ಯ ಎಳನೀರು ಮಾಡಿಕೊಂಡು ಜೀವನ ಕಟ್ಟಿಕೊಳ್ಳುತ್ತಿದ್ದನು. ಆದರೆ, ಈ ಸ್ಥಳಕ್ಕೆ ಬಂದು ಸ್ನೇಹ ಬೆಳೆಸಿಕೊಂಡಿದ್ದ ಮಂಗಳಮುಖಿ ತನ್ನ ಮಗನನ್ನು ಆಗಾಗ ಜೊತೆಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿದ್ದಾರೆಂದು ರಾಹುಲ್ ಮೌರ್ಯನ ತಂದೆ ಆರೋಪಿಸಿದ್ದಾರೆ. ನಾಲ್ಕು ತಿಂಗಳ ನಾಪತ್ತೆಯಾಗಿದ್ದ ರಾಹುಲ್ ಆ ಸಮಯದಲ್ಲಿ ಎಲ್ಲಿದ್ದ, ಏನು ಘಟನೆ ನಡೆದಿದೆ ಎಂಬುದರ ಬಗ್ಗೆ ಯಾವುದೇ ವಿಚಾರವನ್ನೂ ಮನೆಯವರ ಬಳಿ ಹೇಳಿಕೊಂಡಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.