ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ರ‍್ಯಾಲಿಯಲ್ಲಿ ಭಾಗಿಯಾದವರಿಗೆ ಕಲ್ಲಂಗಡಿ ಹಣ್ಣು ಭಾಗ್ಯ
ಕೆಲವರು ಹಣ್ಣನ್ನು ಮನೆಗೆ ಹೊತ್ತುಕೊಂಡು ಹೋದರೆ ಬೇರೆ ಕೆಲವರು ದಾಹ ತಣಿಸಲು ಅಲ್ಲೇ ಅದನ್ನು ಒಡೆದು ತಿಂದರು. ದೃಶ್ಯಗಳಲ್ಲಿ ನೋಡಿ, ಬಹಳಷ್ಟು ಜನರ ಕೈಗಳಲ್ಲಿ, ತಲೆಮೇಲೆ, ಕಂಕುಳಲ್ಲಿ ಕಲ್ಲಂಗಡಿ ಹಣ್ಣು ಕಾಣುತ್ತವೆ. ಮತ್ತೊಂದೆಡೆ ತಮ್ಮ ಅಭಿಮಾನಿಗಳಿಗೆ ಸ್ಟಾರ್ ಚಂದ್ರು ನೀರಿನ ಬಾಟಲಿಗಳ ವ್ಯವಸ್ಥೆ ಕೂಡ ಮಾಡಿದ್ದರು. ಅದರೆ ಅಲ್ಲೂ ಅದೇ ನೂಕುನುಗ್ಗಲು!
ಮಂಡ್ಯ: ನೆತ್ತಿಮೇಲೆ ಬೆಂಕಿಯುಗುಳುವ ಸೂರ್ಯ, ಹೆಂಚಿನಂತೆ ಕಾದ ಭೂಮಿ ಮತ್ತು ನೂಕುನುಗ್ಗಲು. ಜನ ಬಾಯಾರಿ ನೀರಿಗಾಗಿ ಹಪಹಪಿಸುವಂತಾಗಲು ಇನ್ನೇನು ಬೇಕು? ಇಂದು ಮಂಡ್ಯ ಲೋಕಸಭಾ ಕ್ಷೇತ್ರದ (Mandya Lok Sabha Seat) ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ರ‍್ಯಾಲಿಯಲ್ಲಿ ಭಾಗವಹಿಸಿದ್ದ ಜನಕ್ಕೆ ಅದೇ ಆಗಿದ್ದು. ಆದರೆ ಅವರ ಅದೃಷ್ಟಕ್ಕೆ ಸ್ಟಾರ್ ಚಂದ್ರು ತಮ್ಮ ಬೆಂಬಲಿಗರಿಗೆ ಬಿಸಿಲ ಝಳದಿಂದ ಕೊಂಚ ನಿರಾಳತೆ ಒದಗಿಸಲು ಕಲ್ಲಂಗಡಿ ಹಣ್ಣುಗಳ (watermelon) ವ್ಯವಸ್ಥೆ ಮಾಡಿದ್ದರು ಅನಿಸುತ್ತೆ. ಅದರೆ ಎಷ್ಟು ಜನಕ್ಕೆ ಅಂತ ಹಣ್ಣು ಕೊಡುವುದು ಸಾಧ್ಯ? ಜನ ತಾ ಮುಂದು ನಾ ಮುಂದು ಅಂತ ಮುಗಬಿದ್ದು ಕಲ್ಲಂಗಡಿ ತೆಗೆದುಕೊಳ್ಳತೊಡಗಿದರು. ನೋಡುನೋಡುತ್ತಿದ್ದಂತೆ ಕಲ್ಲಂಗಡಿ ಹಣ್ಣಿನ ರಾಶಿ ಬಿಸಿಲಲ್ಲಿಟ್ಟ ಮಂಜಿನ ಹಾಗೆ ಕರಗಿಹೋಯಿತು. ಕೆಲವರು ಹಣ್ಣನ್ನು ಮನೆಗೆ ಹೊತ್ತುಕೊಂಡು ಹೋದರೆ ಬೇರೆ ಕೆಲವರು ದಾಹ ತಣಿಸಲು ಅಲ್ಲೇ ಅದನ್ನು ಒಡೆದು ತಿಂದರು. ದೃಶ್ಯಗಳಲ್ಲಿ ನೋಡಿ, ಬಹಳಷ್ಟು ಜನರ ಕೈಗಳಲ್ಲಿ, ತಲೆಮೇಲೆ, ಕಂಕುಳಲ್ಲಿ ಕಲ್ಲಂಗಡಿ ಹಣ್ಣು ಕಾಣುತ್ತವೆ. ಮತ್ತೊಂದೆಡೆ ತಮ್ಮ ಅಭಿಮಾನಿಗಳಿಗೆ ಸ್ಟಾರ್ ಚಂದ್ರು ನೀರಿನ ಬಾಟಲಿಗಳ ವ್ಯವಸ್ಥೆ ಕೂಡ ಮಾಡಿದ್ದರು. ಅದರೆ ಅಲ್ಲೂ ಅದೇ ನೂಕುನುಗ್ಗಲು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹುಟ್ಟು ಕೋಟ್ಯಧೀಶರಾಗಿದ್ದ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಬಳಿ ಈಗ ಆಸ್ತಿ ಎಷ್ಟಿದೆ ಗೊತ್ತಾ?