Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಸ್ವಾಮಿಯವರ ಯಾವ ನಿರ್ಧಾರದಲ್ಲೂ ಪಕ್ಷದ ಕಾರ್ಯಕರ್ತರ ಸಹಮತವಿಲ್ಲ: ಡಿಕೆ ಶಿವಕುಮಾರ್

ಕುಮಾರಸ್ವಾಮಿಯವರ ಯಾವ ನಿರ್ಧಾರದಲ್ಲೂ ಪಕ್ಷದ ಕಾರ್ಯಕರ್ತರ ಸಹಮತವಿಲ್ಲ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 01, 2024 | 4:47 PM

ತಾನು ಪ್ರಚಾರಕ್ಕೆ ಹೋದೆಡೆಯೆಲ್ಲ ಜನ ಕಮಲದ ಹೂವು ಕೆರೆಯಲ್ಲಿರಬೇಕು, ತೆನೆ ಹೊಲದಲ್ಲಿರಬೇಕು ಮತ್ತು ಯಾವತ್ತಿಗೂ ಕಷ್ಟಗಳಿಗೆ ಸ್ಪಂದಿಸುವ ಕೈ ತಮ್ಮ ಜೊತೆಯಿರಬೇಕು ಅನ್ನುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಶಿವಕುಮಾರ್ ಅಬ್ಬರದ ಭಾಷಣ ಮಾಡುತ್ತಿದ್ದರೆ ಅವರ ಬಲಭಾಗದಲ್ಲಿದ್ದ ಸ್ಟಾರ್ ಚಂದ್ರು ಮಾತ್ರ ಅವರ ಮಾತು ಮುಗಿಯುವವರೆಗೆ ಕೈ ಮುಗಿದೇ ನಿಂತಿದ್ದರು!

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಪರ ಇಂದು ಅಬ್ಬರದ ಪ್ರಚಾರ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮೇಲೆ ಮಾತಿನ ಪ್ರಹಾರ ನಡೆಸಿದರು. ರಾಜಕೀಯದಲ್ಲಿ ನೆಲೆಕಂಡುಕೊಳ್ಳಲು ಸಹಕಾರ ಮತ್ತು ಅನ್ನ ನೀಡಿದ ರಾಮನಗರದ ಜನರ ಬಗ್ಗೆ ಅನುಕಂಪವಿಲ್ಲದ ಕುಮಾರಸ್ವಾಮಿ, ಕೇವಲ ತಮ್ಮ ಸ್ವಾರ್ಥಕ್ಕಾಗಿ ಬಾಮೈದನನ್ನು ಕರೆದೊಯ್ದು ಬಿಜೆಪಿ ಟಿಕೆಟ್ ಕೊಡಿಸಿದ್ದಾರೆ, ಅವರ ಯಾವ ನಿರ್ಧಾರದಲ್ಲೂ ಜೆಡಿಎಸ್ ಕಾರ್ಯಕರ್ತರು ಅವರೊಂದಿಗಿಲ್ಲ, ಎಂದು ಹೇಳಿದರು. ಕೋವಿಡ್ ಸಮಯದಲ್ಲಿ ಜನರ ಕಷ್ಟಗಳಿಗೆ ನೆರವಾಗಿದ್ದು ಕಾಂಗ್ರೆಸ್ ಎಂದು ಹೇಳಿದ ಶಿವಕುಮಾರ್ ತನ್ನ ಸಹೋದರ ಸುರೇಶ್ ರಾಜ್ಯವನ್ನೆಲ್ಲ ಸುತ್ತಿ ಜನರನ್ನು ತಮ್ಮ ತಮ್ಮ ಊರುಗಳಿಗೆ ತಲುಪಿಸಿದರು ಎಂದರು. ತಾನು ಪ್ರಚಾರಕ್ಕೆ ಹೋದೆಡೆಯೆಲ್ಲ ಜನ ಕಮಲದ ಹೂವು ಕೆರೆಯಲ್ಲಿರಬೇಕು, ತೆನೆ ಹೊಲದಲ್ಲಿರಬೇಕು ಮತ್ತು ಯಾವತ್ತಿಗೂ ಕಷ್ಟಗಳಿಗೆ ಸ್ಪಂದಿಸುವ ಕೈ ತಮ್ಮ ಜೊತೆಯಿರಬೇಕು ಅನ್ನುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಶಿವಕುಮಾರ್ ಅಬ್ಬರದ ಭಾಷಣ ಮಾಡುತ್ತಿದ್ದರೆ ಅವರ ಬಲಭಾಗದಲ್ಲಿದ್ದ ಸ್ಟಾರ್ ಚಂದ್ರು ಮಾತ್ರ ಅವರ ಮಾತು ಮುಗಿಯುವವರೆಗೆ ಕೈ ಮುಗಿದೇ ನಿಂತಿದ್ದರು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ:  ಜನರಿಗೆ ಹೆದರಿಸುವುದನ್ನು ಬಿಟ್ಟು ಡಿಕೆ ಸಹೋದರರು ಬೇರೆ ಯಾವ ಜನಸೇವೆ ಮಾಡಿದ್ದಾರೆ? ಹೆಚ್ ಡಿ ಕುಮಾರಸ್ವಾಮಿ