ಮಂಡ್ಯ: 8 ಗಂಟೆಗಳ ಕಾಲ ತಲೆ ಕೆಳಗಾಗಿ ಜೋತಾಡಿದ ಹದ್ದು: ವಿಡಿಯೋ ವೈರಲ್
ಮಂಡ್ಯದ ವಿನೋಬ ರಸ್ತೆಯಲ್ಲಿ ಬೇಟೆಯಾಡಲು ಬಂದ ಹದ್ದುವೊಂದು ತಲೆ ಕೆಳಗಾಗಿ ಜೊತಾಡಿದೆ.
ಮಂಡ್ಯದ ವಿನೋಬ ರಸ್ತೆಯಲ್ಲಿ ಬೇಟೆಯಾಡಲು ಬಂದ ಹದ್ದವೊಂದು ತಲೆ ಕೆಳಗಾಗಿ ಜೊತಾಡಿದೆ. ಹೌದು ಬೇಟೆಯಾಡಲು ಬಂದ ಹದ್ದಿನ ಒಂದು ಕಾಲು ಕಿಟಕಿಗೆ ಸಿಲುಕಿಕೊಂಡಿದೆ. ಇದರಿಂದ ಹದ್ದು ತಲೆ ಕೆಳಗಾಗಿ ಜೊತಾಡಿದೆ. ಇನ್ನು ಹದ್ದಿನ ಪರದಾಟವನ್ನು ನೋಡಿದ ಸ್ಥಳೀಯರು ಅರಣ್ಯಾಧಿಕಾರಿಗೆ ಮಾಹಿತಿಯನ್ನು ನೀಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಮಂಡ್ಯ ಡಿಆರ್ಎಫ್ಓ ಸುರೇಶ್ ಹಾಗೂ ವೈದ್ಯ ಸ್ನೇಕ್ ಮಹೇಶ್ ಕಬ್ಬಿಣದ ರಾಡನ್ನು ಹದ್ದುವಿನ ಹತ್ರ ತೆಗೆದು ಕೊಂಡು ಹೋಗುತ್ತಿದ್ದಂತೆ ಹದ್ದು ಹಾರಿ ಹೋಗಿದೆ.
ಕೊನೆಗು ಹದ್ದಿಗೆ ಬಂಧನದಿಂದ ಮುಕ್ತಿ ಸಿಕ್ಕಿದೆ. 8 ಗಂಟೆಗಳ ಪರದಾಟಕ್ಕೆ ತೆರೆ ಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ಹದ್ದುಗಳ ಸಂತತಿ ಕಡಿಮೆಯಾಗುತ್ತಿದ್ದು ಜನ ಇಲಿ ಪಾಷಣ ಹಾಕಿ ಕೊಂದ ಇಲಿಗಳನ್ನು ರಸ್ತೆಗೆ ಎಸೆಯುತ್ತಿದ್ದಾರೆ ಇದನ್ನು ತಿಂದ ಹದ್ದುಗಳು ಸಹ ಸಾವನ್ನಪ್ಪುತ್ತಿವೆ.
Published on: Nov 14, 2022 08:59 PM