ಬೆಂಗಳೂರಿನಿಂದ ಮಂಡ್ಯಗೆ ರೈಲಿನಲ್ಲಿ ಪ್ರಯಾಣಿಸಿ ಸರಳತೆ ಮೆರೆದರು ಸಂಸದೆ ಸುಮಲತಾ ಅಂಬರೀಷ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 28, 2022 | 5:27 PM

ಮಂಡ್ಯ ಮತ್ತು ಬೆಂಗಳೂರು ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಕಾರಿನಲ್ಲಿ ಪ್ರಯಾಣಿಸುವುದಕ್ಕಿಂತ ರೈಲು ಪ್ರಯಾಣವೇ ಉತ್ತಮ ಎಂದು ಹಾಗೆ ಬಂದಿದ್ದು ಎಂದು ಸಂಸದೆಯವರು ಮಂಡ್ಯ ರೈಲು ನಿಲ್ದಾಣದಲ್ಲಿ ಮಾಧ್ಯಮದವರಿಗೆ ಹೇಳಿದರು.

ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರು ಮಂಗಳವಾರ ಬೆಂಗಳೂರಿನಿಂದ ಮಂಡ್ಯಗೆ (Mandya) ರೈಲಿನಲ್ಲಿ ಪ್ರಯಾಣಿಸಿ ಸರಳತೆ ಪ್ರದರ್ಶಿಸಿದರು. ಮಂಡ್ಯ ಜಿಲ್ಲಾಮಟ್ಟದ ಸಲಹಾ ಸಮಿತಿ ಮತ್ತು ಪ್ರಗತಿಪರಿಶೀಲನಾ ಸಮಿತಿಗಳ ಸಭೆಯಲ್ಲಿ (KDP Meeting) ಪಾಲ್ಗೊಳ್ಳಲು ಸುಮಲತಾ ಅವರು ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣಿಸಿ ಮಂಡ್ಯವನ್ನು ತಲುಪಿದರು. ಮಂಡ್ಯ ಮತ್ತು ಬೆಂಗಳೂರು ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಕಾರಿನಲ್ಲಿ ಪ್ರಯಾಣಿಸುವುದಕ್ಕಿಂತ ರೈಲು ಪ್ರಯಾಣವೇ ಉತ್ತಮ ಎಂದು ಹಾಗೆ ಬಂದಿದ್ದು ಎಂದು ಸಂಸದೆಯವರು ಮಂಡ್ಯ ರೈಲು ನಿಲ್ದಾಣದಲ್ಲಿ ಮಾಧ್ಯಮದವರಿಗೆ ಹೇಳಿದರು.

ಇದನ್ನೂ ಓದಿ:   Viral Video: ಸಾಕು ನಾಯಿಯೊಂದಿಗೆ ‘777 ಚಾರ್ಲಿ’ ವೀಕ್ಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ