ಭಾರತ್ ಜೋಡೋ ಪಾದಾಯಾತ್ರೆ ವೇಳೆ ಪತ್ರಕರ್ತರ ಮೇಲೆ ಪೊಲೀಸರ ಹಲ್ಲೆ
ಮಂಡ್ಯ ಜಿಲ್ಲೆ ಪಾಂಡವಪುರದ ಜಕ್ಕನಹಳ್ಳಿ ಕ್ರಾಸ್‌ನಲ್ಲಿ ಪೊಲೀಸ್ ಸಿಬ್ಬಂದಿ ಮಾಧ್ಯಮ ಸಿಬ್ಬಂದಿ ಮೇಲೆ ದುಂಡಾವರ್ತನೆ ತೋರಿದ್ದು ಅದನ್ನು ನಿಯಂತ್ರಿಸದೆ SP ಮೌನ ತಾಳಿದ್ದರು.
ಮಂಡ್ಯ: ಭಾರತ್ ಜೋಡೋ ಯಾತ್ರೆ ವೇಳೆ ಮಾಧ್ಯಮ ಸಿಬ್ಬಂದಿ ಮೇಲೆ ಪೊಲೀಸರು ದುಂಡಾವರ್ತನೆ ತೋರಿದ್ದು ಇದನ್ನು ನೋಡಿದರೂ ನೋಡಿದಂತೆ ಮಂಡ್ಯ ಜಿಲ್ಲೆ ಎಸ್‌ಪಿ ಎನ್.ಯತೀಶ್ ಮೊಂಡುತನ ಪ್ರದರ್ಶನ ಮಾಡಿದ್ದಾರೆ. ಪಾದಯಾತ್ರೆ ವೇಳೆ ಜನರನ್ನು ಕಳುಹಿಸುವ ಬದಲು ಮಾಧ್ಯಮದವರ ಮೇಲೆ ದಬ್ಬಾಳಿಕೆ ಮಾಡಿ ಹಲ್ಲೆ ನಡೆಸಲಾಗಿದೆ. ಮಂಡ್ಯ ಜಿಲ್ಲೆ ಪಾಂಡವಪುರದ ಜಕ್ಕನಹಳ್ಳಿ ಕ್ರಾಸ್‌ನಲ್ಲಿ ಪೊಲೀಸ್ ಸಿಬ್ಬಂದಿ ಮಾಧ್ಯಮ ಸಿಬ್ಬಂದಿ ಮೇಲೆ ದುಂಡಾವರ್ತನೆ ತೋರಿದ್ದು ಅದನ್ನು ನಿಯಂತ್ರಿಸದೆ SP ಮೌನ ತಾಳಿದ್ದರು. ಮಂಡ್ಯ SP ಯತೀಶ್ ನಡೆಗೆ ಮಾಧ್ಯಮ ಪ್ರತಿನಿಧಿಗಳು ಗರಂ ಆಗಿದ್ದಾರೆ.