ವರಮಹಾಲಕ್ಷ್ಮಿ ಹಬ್ಬ: ಚಾಮುಂಡೇಶ್ವರಿ ದೇವಿಗೆ ನೋಟುಗಳಿಂದ ಅಲಂಕಾರ

Updated By: ವಿವೇಕ ಬಿರಾದಾರ

Updated on: Aug 08, 2025 | 9:30 PM

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಿ ಮತ್ತು ದೇವಸ್ಥಾನದ ಗರ್ಭಗುಡಿಯನ್ನು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಭಕ್ತರಿಂದ ಸಂಗ್ರಹಿಸಿದ 3.5 ಲಕ್ಷ ರೂಪಾಯಿಗಳ ನೋಟುಗಳಿಂದ ಅಲಂಕರಿಸಲಾಗಿದೆ. ಈ ಧನಲಕ್ಷ್ಮೀ ಅಲಂಕಾರವು ಭಕ್ತರನ್ನು ಆಕರ್ಷಿಸುತ್ತಿದೆ. ದೇವಿಯ ವಿಶೇಷ ಪೂಜೆ ಮತ್ತು ಪ್ರಸಾದ ವಿತರಣೆಯನ್ನೂ ನಡೆಸಲಾಗಿದೆ.

ಮಂಡ್ಯ: ರಾಜ್ಯಾದ್ಯಂತ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿರುವ ಚಾಮುಂಡೇಶ್ವರಿ ದೇವಿ ಹಾಗೂ ಗರ್ಭಗುಡಿಯನ್ನು ನೋಟುಗಳಿಂದ ಅಲಂಕಾರ ಮಾಡಲಾಗಿದೆ. ದೇವಿ ಹಾಗೂ ಗರ್ಭಗುಡಿಗೆ ನೋಟಿನಿಂದ ಧನಲಕ್ಷ್ಮಿ ಅಲಂಕಾರ‌ ಮಾಡಲಾಗಿದೆ. ಭಕ್ತರಿಂದ 3.50ಲಕ್ಷ ರೂ. ಸಂಗ್ರಹಿಸಲಾಗಿದೆ. ದೇವಿ ಸೇರಿದಂತೆ ಗರ್ಭಗುಡಿಯ ಸುತ್ತಲು 10, 20, 50, 100, 200 ಹಾಗೂ 5005 ನೋಟುಗಳಿಂದ ಅಲಂಕಾರ ಮಾಡಲಾಗಿದೆ. ಧನಲಕ್ಷ್ಮಿ ಅಲಂಕಾರ ಕಣ್ತುಂಬಿಕೊಳ್ಳಲು‌ ಭಕ್ತರು ದೇಗುಲಕ್ಕೆ ಬರುತ್ತಿದ್ದಾರೆ. ಲಕ್ಷೀಶ್ ನೇತೃತ್ವದಲ್ಲಿ ಮುಂಜಾನೆಯಿಂದಲೇ ದೇವಿಗೆ ಪೂಜಾ ಕೈಂಕರ್ಯ ನೆರವೇರಿತು. ದೇಗುಲಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Aug 08, 2025 09:27 PM