AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆ ಬೇಗೆ ಬೆನ್ನಲ್ಲೇ ಎಳನೀರಿಗೆ ಭಾರಿ ಬೇಡಿಕೆ, ದರವೂ ಏರಿಕೆ: ಪೂರೈಕೆಯಾಗದೆ ವ್ಯಾಪಾರಿಗಳು ಕಂಗಾಲು

ಬೇಸಿಗೆ ಬೇಗೆ ಬೆನ್ನಲ್ಲೇ ಎಳನೀರಿಗೆ ಭಾರಿ ಬೇಡಿಕೆ, ದರವೂ ಏರಿಕೆ: ಪೂರೈಕೆಯಾಗದೆ ವ್ಯಾಪಾರಿಗಳು ಕಂಗಾಲು

ದಿಲೀಪ್​, ಚೌಡಹಳ್ಳಿ
| Edited By: |

Updated on: Apr 28, 2026 | 12:36 PM

Share

ಭಾರತದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಎಳನೀರಿಗೆ ಬೇಡಿಕೆ ಏರಿದೆ. ಏಷ್ಯಾದ ಅತಿದೊಡ್ಡ ಎಳನೀರು ಮಾರುಕಟ್ಟೆಯಾದ ಮದ್ದೂರಿನಲ್ಲಿ ಎಳನೀರು ಪೂರೈಕೆ ಕಡಿಮೆಯಾಗಿದ್ದು, ಬೆಲೆ ಗಗನಕ್ಕೇರಿದೆ. ನುಸಿ ರೋಗ ಮತ್ತು ಮರಗಳಿಂದ ಎಳನೀರು ಉದುರುತ್ತಿರುವುದರಿಂದ ಪೂರೈಕೆ ಮತ್ತಷ್ಟು ಕುಗ್ಗಿದೆ. ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ ಸೇರಿದಂತೆ ಹಲವು ನಗರಗಳಿಗೆ ಇಲ್ಲಿಂದಲೇ ಎಳನೀರು ಸರಬರಾಜಾಗುತ್ತದೆ.

ಮಂಡ್ಯ, ಏಪ್ರಿಲ್ 28: ಸುಡು ಬೇಸಿಗೆಯಲ್ಲಿ ತಂಪಾದ ಪಾನೀಯಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಎಳನೀರಿಗೆ ಬಾರಿ ಬೇಡಿಕೆ ಸೃಷ್ಟಿಯಾಗಿದೆ. ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಎಳನೀರು ಮಾರುಕಟ್ಟೆ ಎಂದು ಹೆಸರಾದ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿಯೂ ಎಳನೀರಿನ ಕೊರತೆ ಎದುರಾಗಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಎಳನೀರು ಸಿಗದೆ ವ್ಯಾಪಾರಸ್ಥರು ಪರದಾಡುತ್ತಿದ್ದಾರೆ. ಸಾಮಾನ್ಯವಾಗಿ ದಿನಕ್ಕೆ ಐದರಿಂದ ಆರು ಲಕ್ಷ ಎಳನೀರು ಬರುತ್ತಿದ್ದ ಮಾರುಕಟ್ಟೆಗೆ ಈಗ ಒಂದೂವರೆಯಿಂದ ಎರಡು ಲಕ್ಷ ಎಳನೀರು ಸಹ ಬರುತ್ತಿಲ್ಲ.

ನುಸಿ ರೋಗ ಹಾಗೂ ಬೇಸಿಗೆಯ ತೀವ್ರತೆಗೆ ಮರಗಳಿಂದ ಎಳನೀರು ಅಕಾಲಿಕವಾಗಿ ಉದುರುತ್ತಿರುವುದು ಪೂರೈಕೆ ಕುಸಿಯಲು ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ, ಎಳನೀರಿನ ಬೆಲೆ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿಯೇ ಗುಣಮಟ್ಟಕ್ಕೆ ಅನುಗುಣವಾಗಿ ಒಂದು ಎಳನೀರಿಗೆ 50 ರಿಂದ 53 ರೂಪಾಯಿ ತಲುಪಿದೆ. ಇದನ್ನು ಖರೀದಿಸಿ ನಗರಗಳಿಗೆ ಸಾಗಿಸುವ ವ್ಯಾಪಾರಸ್ಥರಿಗೆ ಸಾರಿಗೆ ಮತ್ತು ಇತರ ವೆಚ್ಚಗಳಿಂದಾಗಿ ಬೆಲೆ ಮತ್ತಷ್ಟು ಹೆಚ್ಚಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದೆ ಗ್ರಾಹಕರು ಮತ್ತು ವ್ಯಾಪಾರಿಗಳು ಸಂಕಷ್ಟ ಎದುರಿಸುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us