ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ದಂಪತಿ ಭೇಟಿ -ನಾಗಪ್ರತಿಷ್ಠೆ, ತುಲಾಭಾರ
ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ದಂಪತಿ ಸಮೇತ ಇಂದು ಸೋಮವಾರ ಭೇಟಿ ನೀಡಿದ್ದು, ನಾಗಪ್ರತಿಷ್ಠೆ, ತುಲಾಭಾರ, ಮಹಾಪೂಜೆ ನೆರವೇರಿಸಿದರು. ಪತ್ನಿ ಚೆನ್ನಮ್ಮ ಜೊತೆಯಾಗಿ ಪೂಜಾ ಕಾರ್ಯಗಳಲ್ಲಿ ಭಾಗಿಯಾದರು. ಎಚ್.ಡಿ.ದೇವೇಗೌಡ ದಂಪತಿ ಬೆಳಿಗ್ಗೆ ಆಶ್ಲೇಷ ಪೂಜೆ ನೆರವೇರಿಸಿದರು. ಬಳಿಕ ಸಂಪುಟ ನರಸಿಂಹ ದೇವರ ದರ್ಶನ ಪಡೆದರು.
ಮಂಗಳೂರು, ಅಕ್ಟೋಬರ್ 9: ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ (Kukke Subrahmanya Temple) ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ದಂಪತಿ (Former Prime Minister HD Deve Gowda couple) ಸಮೇತ ಇಂದು ಸೋಮವಾರ ಭೇಟಿ ನೀಡಿದ್ದು, ನಾಗಪ್ರತಿಷ್ಠೆ, ತುಲಾಭಾರ, ಮಹಾಪೂಜೆ (Nagapratisthe, Tulabharas) ನೆರವೇರಿಸಿದರು. ಪತ್ನಿ ಚೆನ್ನಮ್ಮ ಜೊತೆಯಾಗಿ ಪೂಜಾ ಕಾರ್ಯಗಳಲ್ಲಿ ಭಾಗಿಯಾದರು. ಎಚ್.ಡಿ.ದೇವೇಗೌಡ ದಂಪತಿ ಬೆಳಿಗ್ಗೆ ಆಶ್ಲೇಷ ಪೂಜೆ ನೆರವೇರಿಸಿದರು. ಬಳಿಕ ಸಂಪುಟ ನರಸಿಂಹ ದೇವರ ದರ್ಶನ ಪಡೆದರು.
ಜೆಡಿಎಸ್ ಮುಖಂಡ ಎಂ.ಬಿ. ಸದಾಶಿವ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಉಪಸ್ಥಿತಿರಿದ್ದರು. ಆಶ್ಲೇಷ ಪೂಜೆಯ ಬಳಿಕ 11 ಗಂಟೆಯವರೆಗೆ ಎಚ್.ಡಿ. ದೇವಗೌಡರು ವಿಶ್ರಾಂತಿ ಪಡೆದರು. ಅದಾದಮೇಲೆ ಮತ್ತೆ ದೇವಳದಲ್ಲಿ ತುಲಾಭಾರ ಸೇವೆ ನೆರವೇರಿಸಿದರು. ಅಕ್ಕಿ, ಬೆಲ್ಲ, ಕಡ್ಲೆಬೇಳೆ ಧಾನ್ಯಗಳಲ್ಲಿ ತುಲಾಭಾರ ಸೇವೆ ನೆರವೇರಿತು. ಎಚ್.ಡಿ. ದೇವೇಗೌಡ ದಂಪತಿ 12 ಗಂಟೆಗೆ ಮಹಾಪೂಜೆಯಲ್ಲಿ ಭಾಗಿಯಾದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Oct 09, 2023 02:04 PM
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು
ಬಿಗ್ಬಾಸ್ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?
