ಚಿಕ್ಕಮಗಳೂರಿನಲ್ಲಿ ಈಜುಕೊಳ ದುರಂತ, ವ್ಯಕ್ತಿ ಸಾವು: ಕೊನೇ ಕ್ಷಣದ ವಿಡಿಯೋ ಸಿಸಿಟಿವಿಲಿ ಸೆರೆ
ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ಖಾಸಗಿ ಬೀಚ್ ರೆಸಾರ್ಟ್ನಲ್ಲಿ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಘಟನೆ ಕರ್ನಾಟಕದಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ಇದೀಗ ಅಂಥದ್ದೇ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವಿಸ್ಟ್ ಕುಶಾಲನಗರದ ವ್ಯಕ್ತಿ ಮೃತಪಟ್ಟ ಘಟನೆ ಖಾಸಗಿ ರೆಸಾರ್ಟ್ನಲ್ಲಿ ಸಂಭವಿಸಿದೆ. ಸಿಸಿಟಿವಿ ವಿಡಿಯೋ ಇಲ್ಲಿದೆ.
ಚಿಕ್ಕಮಗಳೂರು, ಮಾರ್ಚ್ 24: ಮಡಿಕೇರಿ ಕುಶಾಲನಗರ ಮೂಲದ ಪ್ರವಾಸಿ ನಿಶಾಂತ್ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ ಈಜುಕೊಳದಲ್ಲಿ ಬಿದ್ದು ದುರ್ಮರಣ ಹೊಂದಿದ್ದಾರೆ. ಈಜಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವಿಸ್ಟ್ ಆಗಿ ಈಜುಕೊಳದಲ್ಲೇ ಅವರು ಸಾವಿಗೀಡಾಗಿದ್ದಾರೆ. ನಿಶಾಂತ್, ಕುಶಾಲನಗರದ ಮೊಬೈಲ್ ಗ್ಯಾಲರಿ ಶಾಪ್ ಮಾಲೀಕರಾಗಿದ್ದರು. ನಿಶಾಂತ್ ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಸ್ನೇಹಿತನ ಜೊತೆ ತೆರಳಿದ ಸಂದರ್ಭ ದುರ್ಘಟನೆ ಸಂಭವಿಸಿದೆ. ನೀರಿಗೆ ಹಾರಿದ ನಂತರ ನಿಶಾಂತ್ ಕೈ ಕಾಲು ಆಡಿಸದ ಕಾರಣ ಸ್ನೇಹಿತ ಹಾಗೂ ಇತರರು ಮೇಲಕ್ಕೆತ್ತಿದ್ದರು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ವಿಡಿಯೋ ಇಲ್ಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Mar 24, 2025 09:55 AM