ಮಂಗಳೂರು ಬ್ಲಾಸ್ಟ್: ಶಾರೀಕ್ ಬಂಧಿಸಿ ಖುಷಿಪಡುತ್ತಿದ್ದೀರಿ, ನೀವು ನಿಮ್ಮ ಫಲವನ್ನು ಶೀಘ್ರದಲ್ಲೇ ಪಡೆಯುತ್ತೀರಿ: ADGP ಅಲೋಕ್ ಕುಮಾರ್ಗೆ ಬೆದರಿಕೆ
ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮತ್ತೊಂದು ದಾಳಿಯ ಎಚ್ಚರಿಕೆ ನೀಡಿದೆ. ಅಲ್ಲದೇ ADGP ಅಲೋಕ್ ಕುಮಾರ್ಗೆ ಬೆದರಿಕೆ ಹಾಕಿದೆ
ಬೆಂಗಳೂರು: ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಹಿಂದೆ ಉಗ್ರರ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಈ ಸ್ಫೋಟ ಪ್ರಕರಣದ ಇಡೀ ದೇಶದಾದ್ಯಂತ ಸದ್ದು ಮಾಡುತ್ತಿದೆ. ಇದರ ಮಧ್ಯೆ ಇದೀಗ ಆರೋಪಿ ಶಾರೀಕ್ನನ್ನು ಬೆಂಬಲಿಸಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮತ್ತೊಂದು ದಾಳಿಯ ಎಚ್ಚರಿಕೆ ನೀಡಿದೆ.
ಶಾರೀಕ್ ಬೆನ್ನಿಗೆ ನಿಂತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್: ಶೀಘ್ರ ಇನ್ನೊಂದು ದಾಳಿ ಮಾಡುವ ಬೆದರಿಕೆ
ಇನ್ನು ಈ ಹೇಳಿಕೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ಗೂ ಎಚ್ಚರಿಕೆ ನೀಡಿದ್ದು, ಶಾರೀಕ್ ಬಂಧಿಸಿ ಖುಷಿಪಡುತ್ತಿದ್ದೀರಿ, ಇದು ಶಾಶ್ವತವಲ್ಲ. ನೀವು ನಿಮ್ಮ ಫಲವನ್ನು ಶೀಘ್ರದಲ್ಲೇ ಪಡೆಯುತ್ತೀರಿ. ನೀವು ನಮ್ಮ ದೃಷ್ಟಿಯಲ್ಲೇ ಇದ್ದೀರಿ, ನಿಮ್ಮನ್ನು ನಾವು ತಲುಪುತ್ತೇವೆ. ಆದರೆ ಯಾವಾಗ ಅನ್ನೋದು ಮುಖ್ಯವಲ್ಲ ಎಂದು ಐಆರ್ಸಿ ಎಡಿಜಿಪಿ ಅಲೋಕ್ ಕುಮಾರ್ಗೆ ಬೆದರಿಕೆ ಸಂದೇಶ ನೀಡಿದೆ.
Published on: Nov 24, 2022 04:42 PM
Loading...
Unable to load recommendations.
Follow Us
