‘ಮನಿಕೆ ಮಗೆ ಹಿತೆ’ ಹಾಡನ್ನು ಒಮ್ಮೆಯಲ್ಲ ಸಾವಿರ ಬಾರಿ ಕೇಳಿಸಿಕೊಂಡರೂ ಬೇಸರವಾಗದು, ಅಮಿತಾಬ್, ಮಾಧುರಿಯವರನ್ನೇ ಕೇಳಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 10, 2021 | 6:38 PM

ಮನಿಕೆ ಮಗೆ ಹಿತೆ ಹಾಡು ಭಾರತ ಮತ್ತು ಶ್ರೀಲಂಕಾದಲ್ಲಿ ಸೆನ್ಸೇಷನನ್ನು ಸೃಷ್ಟಿಮಾಡಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ಹಾಡಿಗೆ ಸುಮಾರು 14 ಕೋಟಿ ವ್ಯೂಸ್ ಬಂದಿವೆ.

‘ಮನಿಕೆ ಮಗೆ ಹಿತೆ’ ಹಾಡು ಕೇಳಿದ್ದೀರಾ? ಕೇವಲ ಈ ಒಂದು ಹಾಡಿನಿಂದ ಶ್ರೀಲಂಕಾದ ಗಾಯಕಿ ಯೋಹಾನಿ ವಿಶ್ವವಿಖ್ಯಾತಳಾಗಿ ಬಿಟ್ಟಿದ್ದಾಳೆ ಮಾರಾಯ್ರೇ. ಸೋಶಿಯಲ್ ಮಿಡಿಯಾಗಳಲ್ಲಿ ಸದಾ ಸಕ್ರಿಯರಾಗಿರುವ ಜನರಂತೂ ಈ ಹಾಡು ಕೇಳಿ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಇದು ಸೂಪರ್ ಡ್ಯೂಪರ್ ಹಿಟ್. ಈ ಹಾಡನ್ನು ಒಮ್ಮೆ ಕೇಳಿ ಸಾಕು, ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ. ಹಾಡನ್ನು ಹಾಡಿರುವ ಯೋಹಾನಿಯ ಸುಶ್ರಾವ್ಯ ಕಂಠಸಿರಿ ನಿಮ್ಮನ್ನು ಮಂತ್ರಮುಗ್ಧಗೊಳಿಸುವುದು ಖಚಿತ ಅದರೊಂದಿಗೆ ಹಾಡಿನ ಹಿನ್ನೆಲೆ ಸಂಗೀತವೂ ನಿಮ್ಮನ್ನು ಕುಣಿಯುವಂತೆ ಮಾಡುತ್ತದೆ.

ಮನಿಕೆ ಮಗೆ ಹಿತೆ ಹಾಡು ಭಾರತ ಮತ್ತು ಶ್ರೀಲಂಕಾದಲ್ಲಿ ಸೆನ್ಸೇಷನನ್ನು ಸೃಷ್ಟಿಮಾಡಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ಹಾಡಿಗೆ ಸುಮಾರು 14 ಕೋಟಿ ವ್ಯೂಸ್ ಬಂದಿವೆ. ಅಂದಹಾಗೆ ಯಾರು ಈ ಯೋಹಾನಿ ಅಂತ ಪ್ರಶ್ನೆ ಹುಟ್ಟೋದು ಸಹಜವೇ. ಓಕೆ, ಆಕೆ ಬಗ್ಗೆ ತಿಳಿದುಕೊಳ್ಳವುದು ಅತ್ಯಂತ ಅವಶ್ಯಕವಾಗಿದೆ.

ಆಗಲೇ ಹೇಳಿದ ಹಾಗೆ ಯೋಹನಿ ಶ್ರೀಲಂಕಾದವಳು ಮತ್ತು 28ರ ಪ್ರಾಯದ ಆಕೆಯ ಪೂರ್ತಿ ಹೆಸರು ಯೋಹಾನಿ ಡಿಲೋಕ ಡಿ ಸಿಲ್ವಾ. ಯೋಹಾನಿ ಗಾಯಕಿ, ಕವಿಯಿತ್ರಿ, ರ‍್ಯಾಪರ್, ಪ್ರೊಡ್ಯೂಸರ್ ಮತ್ತು ಮತ್ತು ಬಿಸಿನೆಸ್ನಲ್ಲೂ ಕೈ ತೊಡಗಿಸಿರುವಾಕೆ. ಆಕೆಯ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ತಾಯಿ ಗಗನಸಖಿ. ಯೋಹಾನಿ ತನ್ನ ಸಂಗೀತದ ಪಯಣ ಆರಂಭಿಸಿದ್ದು ಯ್ಯೂಟ್ಯೂಬರ್ ಆಗಿ.

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಈ ಮನಿಕೆ ಮಗೆ ಹಿತೆ ಹಾಡು ಎಷ್ಟು ಇಷ್ಟವಾಗಿದೆಯೆಂದರೆ ತಮ್ಮ ಕಾಲಿಯಾ ಚಿತ್ರದ, ‘ಜಹಾಂ ತೇರಿ ನಜರ್ ಹೈ ಮೆರಿ ಜಾನ್ ಮುಝೆ ಖಬರ್ ಹೈ’ ಹಾಡಿಗೆ ಮನಿಕೆ ಮಗೆ ಹಿತೆ ಹಾಡನ್ನು ಎಡಿಟ್ ಮಾಡಿ ಅದನ್ನು ಟ್ವೀಟ್ ಮಾಡಿದ್ದಾರೆ. ನೀವೇ ನೋಡಿ.

90 ರ ದಶಕದಲ್ಲಿ ಬಾಲಿವುಡ್ ಸಾಮ್ರಾಜ್ಞಿಯೆನಿಸಿಕೊಂಡಿದ್ದ ಮಾಧುರಿ ದೀಕ್ಷೀತ್ ಅವರಿಗೂ ಮನಿಕೆ ಮಗೆ ಹಿತೆ ಹಾಡು ಕ್ಲೀನ್ ಬೋಲ್ಡ್ ಮಾಡಿದೆ. ಹಾಡಿಗೆ ಮೈಮರೆತ ಒಂದು ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ.


ಏರ್ ಏಷ್ಯಾದ ಒಬ್ಬ ಗಗನಸಖಿ ವಿಮಾನದಲ್ಲೇ ಈ ಹಾಡಿಗೆ ಕುಣಿಯಲಾರಂಭಿಸಿದ್ದಾಳೆ.


ನಿಸ್ಸಂದೇಹವಾಗಿ ಈ ಹಾಡು ಜನರನ್ನು ಹುಚ್ಚದ್ದು ಕುಣಿಯುವಂತೆ ಮಾಡಿದೆ.

ಇದನ್ನೂ ಓದಿ:  ಯುವತಿಯನ್ನು ಚುಡಾಯಿಸಿದಕ್ಕೆ ಗುಂಪುಗಳ ನಡುವೆ ಭಾರಿ ಘರ್ಷಣೆ, ವಿಡಿಯೋ ವೈರಲ್; ಆರೋಪಿಗಳ ಬಂಧನ