ಮಿಸ್ಟರ್ ಕೂಲ್ ಎಮ್ಮೆಸ್ ಧೋನಿಯನ್ನು ಟೀಮ್ ಇಂಡಿಯಾದ ಮೆಂಟರ್ ಅಗಿ ನೇಮಿಸಿದ್ದು ಬಿಸಿಸಿಐನ ಮಾಸ್ಟರ್ ಸ್ಟ್ರೋಕ್!

ಮಿಸ್ಟರ್ ಕೂಲ್ ಎಮ್ಮೆಸ್ ಧೋನಿಯನ್ನು ಟೀಮ್ ಇಂಡಿಯಾದ ಮೆಂಟರ್ ಅಗಿ ನೇಮಿಸಿದ್ದು ಬಿಸಿಸಿಐನ ಮಾಸ್ಟರ್ ಸ್ಟ್ರೋಕ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 10, 2021 | 8:01 PM

ಧೋನಿಗೆ ನಾಯಕನಾಗಿ ಇರುವ ಬೆಟ್ಟದಷ್ಟು ಅನುಭವ ಮತ್ತು ಈ ಆವೃತ್ತಿಗಳಲ್ಲಿ ಮಾಡಿರುವ ಸಾಧನೆಗಳ ಹಿನ್ನೆಲೆಯಲ್ಲಿ ಮೆಂಟರ್ ಅಗಿ ನೇಮಕ ಮಾಡಲಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲೂ ಒಬ್ಬ ನಾಯಕನಾಗಿ ಧೋನಿ ಮಿಂಚಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸೀಮಿತ ಓವರ್​ಗಳ ಆವೃತ್ತಿಗೆ ಅದ್ವಿತೀಯ ನಾಯಕರೆನಿಸಿಕೊಂಡಿದ್ದ ಮಹೇಂದ್ರಸಿಂಗ್ ಧೋನಿಯವರನ್ನು ಮುಂದಿನ ತಿಂಗಳು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಆಯೋಜಿಸಲಾಗುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತೀಯ ಟೀಮಿಗೆ ಮೆಂಟರ್ ಅಂತ ನೇಮಕ ಮಾಡಿ ಮಾಸ್ಟರ್ ಸ್ಟ್ರೋಕ್ ಆಡಿದೆ. ಈ ನಡೆ ಅನಿರೀಕ್ಷಿತ ಆದರೆ ಅತ್ಯಂತ ಸ್ವಾಗತಾರ್ಹ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿನಂದನೆಗೆ ಅರ್ಹರು.

ಧೋನಿಗೆ ನಾಯಕನಾಗಿ ಇರುವ ಬೆಟ್ಟದಷ್ಟು ಅನುಭವ ಮತ್ತು ಈ ಆವೃತ್ತಿಗಳಲ್ಲಿ ಮಾಡಿರುವ ಸಾಧನೆಗಳ ಹಿನ್ನೆಲೆಯಲ್ಲಿ ಮೆಂಟರ್ ಅಗಿ ನೇಮಕ ಮಾಡಲಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲೂ ಒಬ್ಬ ನಾಯಕನಾಗಿ ಧೋನಿ ಮಿಂಚಿದ್ದಾರೆ.

ಕೊಹ್ಲಿಯೂ ನಿಸ್ಸಂದೇಹವಾಗಿ ಉತ್ತಮ ನಾಯಕನೇ, ಆದರೆ ಅವರ ನಾಯಕತ್ವದಲ್ಲಿ ಭಾರತ ಯಾವುದೇ ಐಸಿಸಿ ಟೂರ್ನಿಯನ್ನು ಗೆದ್ದಿಲ್ಲ. ಭಾರತ ಕೊನೆಯ ಬಾರಿಗೆ ಐಸಿಸಿ ಟ್ರೋಫಿಯೊಂದನ್ನು ಗೆದ್ದಿದ್ದು 2013 ರಲ್ಲಿ. ಆಗ ಧೋನಿ ಟೀಮಿನ ನಾಯಕರಾಗಿದ್ದರು. ಅದರ ಹೊರತಾಗಿ 2007ರ ಟಿ20 ವಿಶ್ವಕಪ್ ಮತ್ತು 2011ರ ಐಸಿಸಿ ವಿಶ್ವಕಪ್ ಗಳನ್ನು ಅವರು ಭಾರತಕ್ಕೆ ಗೆದ್ದುಕೊಟ್ಟಿದ್ದಾರೆ.

ಲಿಮಿಟೆಡ್ ಓವರ್ಸ್ ಕ್ರಿಕೆಟ್​ನಲ್ಲಿ ಕೊಹ್ಲಿ ಟೀಮನ್ನು ಉತ್ತಮವಾಗೇ ಲೀಡ್ ಮಾಡುತ್ತಾರಾದರೂ ನಾಕ್ಔಟ್ ಹಂತಕ್ಕೆ ಬಂದಾಗ ಮುಗ್ಗುರಿಸುತ್ತಾರೆ. ಇಂಡಿಯನ್ ಪ್ರಿಮೀಯರ್ ಲೀಗ್ ಇದಕ್ಕೆ ಉತ್ತಮ ಉದಾಹರಣೆಯಾಗಬಲ್ಲದು.

ಮಾಡರ್ನ್ ಕ್ರಿಕೆಟ್​ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಕೊಹ್ಹಿ 2013 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮಿನ ನಾಯಕರಾಗಿದ್ದರೂ, ಒಮ್ಮೆಯೂ ಐಪಿಎಲ್ ಗೆದ್ದಿಲ್ಲ. ಆದರೆ, ಚೆನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ವಿಶ್ವದ ಅತಿ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಯನ್ನು ಮೂರು ಬಾರಿ ಗೆದ್ದಿದ್ದಾರೆ. ಕೊಹ್ಲಿಯಲ್ಲಿನ ಈ ನೆಗೆಟಿವ್ ಅಂಶವನ್ನು ಇಲ್ಲವಾಗಿಸಲು ಧೋನಿಯನ್ನು ಮೆಂಟರ್ ಆಗಿ ಕರೆತರಲಾಗಿದೆ.

ಮೆಂಟರ್​ ಹುದ್ದೆ ಅಥವಾ ಜವಾಬ್ದಾರಿಗೆ ಧೋನಿಗಿಂತ ಯೋಗ್ಯರು ಯಾರೂ ಇರಲಿಲ್ಲ. ಈ ಅಂಶವನ್ನು ಗಂಗೂಲಿ ಚೆನ್ನಾಗಿ ಮನಗಂಡಿದ್ದಾರೆ.

ಇದನ್ನೂ ಓದಿ:  T20 World Cup 2021: ಬಿಗ್ ಹಿಟ್ಟರ್​ಗಳ ದಂಡು: ಟಿ20 ವಿಶ್ವಕಪ್​ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ವೆಸ್ಟ್ ಇಂಡೀಸ್