ಮಣಿಪುರ ಹಿಂಸಾಚಾರ: 6 ಶವ ಪತ್ತೆ, ಭುಗಿಲೆದ್ದ ಪ್ರತಿಭಟನೆ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ

ಮಣಿಪುರ ಹಿಂಸಾಚಾರ: 6 ಶವ ಪತ್ತೆ, ಭುಗಿಲೆದ್ದ ಪ್ರತಿಭಟನೆ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ

ನಯನಾ ರಾಜೀವ್
|

Updated on:Nov 17, 2024 | 8:30 AM

ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ. ಮೊನೆನಯಷ್ಟೇ ನಾಪತ್ತೆಯಾಗಿದ್ದ 6 ಮಂದಿ ಶವ ಪ್ತತೆಯಾದ ಬಳಿಕ ಪ್ರತಿಭಟನೆ ಭುಗಿಲೆದ್ದಿದೆ. ಸಚಿವರು, ಶಾಸಕರ ಮನೆಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಪ್ರಯತ್ನಿಸಿರುವ ಘಟನೆ ನಡೆದಿದೆ. ಅವರ ನಿವಾಸಗಳನ್ನು ಧ್ವಂಸಗೊಳಿಸಿದರು ಮತ್ತು ಕೆಲವರಿಗೆ ಬೆಂಕಿ ಹಚ್ಚಿದರು.

ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ. ಮೊನೆನಯಷ್ಟೇ ನಾಪತ್ತೆಯಾಗಿದ್ದ 6 ಮಂದಿ ಶವ ಪ್ತತೆಯಾದ ಬಳಿಕ ಪ್ರತಿಭಟನೆ ಭುಗಿಲೆದ್ದಿದೆ. ಸಚಿವರು, ಶಾಸಕರ ಮನೆಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಪ್ರಯತ್ನಿಸಿರುವ ಘಟನೆ ನಡೆದಿದೆ.
ಅವರ ನಿವಾಸಗಳನ್ನು ಧ್ವಂಸಗೊಳಿಸಿದರು ಮತ್ತು ಕೆಲವರಿಗೆ ಬೆಂಕಿ ಹಚ್ಚಿದರು. ಇಂಫಾಲ್‌ನ ವಿವಿಧ ಭಾಗಗಳಲ್ಲಿ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಹಾರಿಸಿದರು. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಮನೆಗೆ ನುಗ್ಗಲು ಪ್ರಯತ್ನಿಸಿದರು. ಇಂಫಾಲ್‌ನಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ, ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಮಣಿಪುರದಲ್ಲಿ ಎರಡು ಚರ್ಚ್ ಸೇರಿದಂತೆ ಹಲವೆಡೆ ಬೆಂಕಿ ಹಚ್ಚಲಾಗಿದೆ. ಮೂವರು ಸಚಿವರು ಮತ್ತು ಆರು ಶಾಸಕರ ಮನೆಗಳನ್ನು ಹಿಂಸಾತ್ಮಕ ಗುಂಪು ಧ್ವಂಸ ಮಾಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Nov 17, 2024 08:29 AM