ಮಂತ್ರಾಲಯ ರಾಯರ ಮಠದ ಹುಂಡಿಗೆ ಹರಿದು ಬಂತು ಭಕ್ತರ ಕೋಟಿ ಕೋಟಿ ರೂ ಕಾಣಿಕೆ
ಜುಲೈ ತಿಂಗಳಲ್ಲಿ ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆಯಿಂದ ಅಪಾರ ಕಾಣಿಕೆ ಬಹಿರಂಗಗೊಂಡಿದೆ. 35 ದಿನಗಳಲ್ಲಿ 5 ಕೋಟಿ 46 ಲಕ್ಷ 6 ಸಾವಿರದ 555 ರೂಪಾಯಿಗಳು, 127 ಗ್ರಾಂ ಚಿನ್ನ ಮತ್ತು 1820 ಗ್ರಾಂ ಬೆಳ್ಳಿ ಆಭರಣಗಳು ದೇವಸ್ಥಾನಕ್ಕೆ ಸಲ್ಲಿಸಲಾಗಿದೆ. ಭಕ್ತರ ಭಕ್ತಿಯ ಪ್ರಮಾಣವನ್ನು ಇದು ಸೂಚಿಸುತ್ತದೆ. ಶ್ರೀ ಮಠದ ಆಡಳಿತ ಮಂಡಳಿಯು ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ರಾಯಚೂರು, ಆಗಸ್ಟ್ 01: ಮಂತ್ರಾಲಯ ರಾಯರ ಮಠದ ಹುಂಡಿಗೆ ಕೊಟ್ಯಂತರ ರೂ ಕಾಣಿಕೆ ಹರಿದು ಬಂದಿದೆ. ಜೂನ್ ಅಂತ್ಯದಿಂದ ಜುಲೈ ತಿಂಗಳ ವರೆಗಿನ ಅವಧಿಯಲ್ಲಿ ಹುಂಡಿಗೆ ಹಾಕಿರುವ ಕಾಣಿಕೆ ಎಣಿಕೆ ಮಾಡಲಾಗಿದ್ದು, 35 ದಿನಗಳಲ್ಲಿ 5 ಕೋಟಿ 46 ಲಕ್ಷ 6 ಸಾವಿರದ 555 ರೂ. ಸಂಗ್ರಹವಾಗಿದೆ. 127 ಗ್ರಾಂ ಚಿನ್ನ, 1820 ಗ್ರಾಂ ಬೆಳ್ಳಿ ಆಭರಣಗಳನ್ನು ಭಕ್ತರು ನೀಡಿದ್ದಾರೆ. ಕಾಣಿಕೆ ಬಗ್ಗೆ ಮಂತ್ರಾಯ ಮಠದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Aug 01, 2025 01:57 PM