ಮಂತ್ರಾಲಯದ ರಾಯರ ಮಠಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಪ್ರಸಿದ್ಧ ಪುಣ್ಯಕ್ಷೇತ್ರ ರಾಯಚೂರು ಜಿಲ್ಲೆಯ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕಳೆದೊಂದು ತಿಂಗಳಲ್ಲಿ ಲಕ್ಷಾಂತರ ಭಕ್ತರು ಹರಿದು ಬಂದಿದ್ದಾರೆ. ಈ ಭಕ್ತರ ಮಹಾಪೂರದ ನಡುವೆಯೇ ರಾಯರ ಮಠಕ್ಕೆ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ. ಕೇವಲ 21 ದಿನಗಳ ಅವಧಿಯಲ್ಲಿ ಭಕ್ತರು ಹುಂಡಿಗೆ ಬರೋಬ್ಬರಿ 3,72,40,530 ರೂಪಾಯಿ ನಗದು ಹಣವನ್ನು ಕಾಣಿಕೆಯ ರೂಪದಲ್ಲಿ ಸಮರ್ಪಿಸಿದ್ದಾರೆ. ನಗದಿನ ಜೊತೆಗೆ 67 ಗ್ರಾಂ ಚಿನ್ನ ಹಾಗೂ 511 ಗ್ರಾಂ ಬೆಳ್ಳಿ ಕೂಡ ಹುಂಡಿಯಲ್ಲಿ ಸಂಗ್ರಹವಾಗಿದೆ. ಮಠದ ವ್ಯವಸ್ಥಾಪಕ ಸಪ್ತಗಿರಿ ಆಚಾರ್ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳು, ಮಠದ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಸಮ್ಮುಖದಲ್ಲಿ ಈ ಬೃಹತ್ ಕಾಣಿಕೆಯ ಎಣಿಕೆ ಕಾರ್ಯ ಶಾಸ್ತ್ರೋಕ್ತವಾಗಿ ನೆರವೇರಿತು.
ರಾಯಚೂರು, ಜೂನ್ 26: ಪ್ರಸಿದ್ಧ ಪುಣ್ಯಕ್ಷೇತ್ರ ರಾಯಚೂರು ಜಿಲ್ಲೆಯ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕಳೆದೊಂದು ತಿಂಗಳಲ್ಲಿ ಲಕ್ಷಾಂತರ ಭಕ್ತರು ಹರಿದು ಬಂದಿದ್ದಾರೆ. ಈ ಭಕ್ತರ ಮಹಾಪೂರದ ನಡುವೆಯೇ ರಾಯರ ಮಠಕ್ಕೆ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ. ಕೇವಲ 21 ದಿನಗಳ ಅವಧಿಯಲ್ಲಿ ಭಕ್ತರು ಹುಂಡಿಗೆ ಬರೋಬ್ಬರಿ 3,72,40,530 ರೂಪಾಯಿ ನಗದು ಹಣವನ್ನು ಕಾಣಿಕೆಯ ರೂಪದಲ್ಲಿ ಸಮರ್ಪಿಸಿದ್ದಾರೆ. ನಗದಿನ ಜೊತೆಗೆ 67 ಗ್ರಾಂ ಚಿನ್ನ ಹಾಗೂ 511 ಗ್ರಾಂ ಬೆಳ್ಳಿ ಕೂಡ ಹುಂಡಿಯಲ್ಲಿ ಸಂಗ್ರಹವಾಗಿದೆ. ಮಠದ ವ್ಯವಸ್ಥಾಪಕ ಸಪ್ತಗಿರಿ ಆಚಾರ್ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳು, ಮಠದ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಸಮ್ಮುಖದಲ್ಲಿ ಈ ಬೃಹತ್ ಕಾಣಿಕೆಯ ಎಣಿಕೆ ಕಾರ್ಯ ಶಾಸ್ತ್ರೋಕ್ತವಾಗಿ ನೆರವೇರಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

