ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಬಹಳಷ್ಟು ಜನ ಸಹಾಯ ಮಾಡಿದ್ದಾರೆ: ಕಾಂಗ್ರೆಸ್ ಕಾರ್ಯಕರ್ತ
ಕಾರ್ಯಕರ್ತನ ಮತ್ತೊಂದು ಅಕ್ಷೇಪಣೆಯೆಂದರೆ, ಸಭೆಗೆ ಬೆಳಗಾವಿ ಜಿಲ್ಲೆಯ ಶಾಸಕರು ಗೈರಾಗಿರುವುದು. ಚುನಾವಣೆ ಸಮಯದಲ್ಲಿ ಬಿ ಫಾರಂ ಪಡೆಯಲು ಮಾತ್ರ ಅವರು ಸೀಮಿತವೇ? ಇವರು ಮಾಡೋದೇ ಹೀಗೆ, ಹೊಸಬರಿಗೆ ಮಣೆ ಹಾಕುತ್ತಾರೆ, ಹಳಬರನ್ನು ಮೂಲೆ ಗುಂಪು ಮಾಡುತ್ತಾರೆ, ಸೋನಿಯಾ ಗಾಂಧಿ ಅವರಲ್ಲ್ಲಿಗೆ ಹೋಗಿ ದೂರು ಸಲ್ಲಿಸುತ್ತೇನೆ ಎಂದು ಅವರು ಹೇಳುತ್ತಾರೆ.
ಬೆಳಗಾವಿ: ಗಾಂಧಿ ಭಾರತ ಪೂರ್ವಭಾವಿ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ ಅವರೊಂದಿಗೆ ವಾಗ್ವಾದ ನಡೆಸಿದ ಕಾಂಗ್ರೆಸ್ ಕಾರ್ಯಕರ್ತ ಇವರೇ. ಇವರು ರೊಚ್ಚಿಗೇಳಲು ಕೆಲವು ಕಾರಣಗಳಿವೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣವಾಗಲು ಸತೀಶ್ ಮತ್ತು ರಮೇಶ್ ಜಾರಕಿಹೊಳಿ ಸೇರಿದಂತೆ ಹಲವಾರು ಜಬ ಸಹಾಯ ಮಾಡಿದ್ದಾರೆ. ಕಚೇರಿಯ ವಿದ್ಯುತ್ ಬಿಲ್ ಮತ್ತು ಲೈಬ್ರರಿ ಖರ್ಚನ್ನು ಸತೀಶ್ ನೋಡಿಕೊಳ್ಳುತ್ತಿದ್ದಾರೆ. ಹಾಗಿರುವಾಗ ಕೇವಲ ಒಬ್ಬರಿಗೆ ಮಾತ್ರ ಶ್ರೇಯಸ್ಸನ್ನು ಹೇಗೆ ನೀಡುತ್ತಾರೆ ಅಂತ ಅವರು ಪ್ರಶ್ನಿಸುತ್ತಾರೆ. ತಾನು ಯಾರ ಬೆಂಬಲಿಗನೂ ಅಲ್ಲ, 1972 ರಿಂದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿಯುತ್ತಿದ್ದೇನೆ ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಿಕೆ ಶಿವಕುಮಾರ್ ಬದಲಾವಣೆಗೆ ಆಗ್ರಹಿಸಿಲ್ಲ: ಸತೀಶ್ ಜಾರಕಿಹೊಳಿ ದಿಢೀರ್ ಯೂಟರ್ನ್