Daily Horoscope: ರವಿ ಕುಂಭ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ತಿಳಿಯಿರಿ
ಮಾರ್ಚ್ 12, ಬುಧವಾರದ ಪಂಚಾಂಗ ವಿವರಗಳು: ರಾಹುಕಾಲ 12:29 ರಿಂದ 1:59 ರವರೆಗೆ. ಸರ್ವಸಿದ್ಧಿ ಕಾಲ ಬೆಳಗ್ಗೆ 10:59 ರಿಂದ 12:21 ರವರೆಗೆ. ಇಂದು ಮಹಾ ಗಣಪತಿಯ ಲಹರಿಗಳ ದಿನ ಹಾಗೂ ವೆಂಕಟೇಶ್ವರ ಆರಾಧನೆಗೆ ಅನುಕೂಲಕರ ದಿನ.ಚಿಕ್ಕನಾಯಕನಹಳ್ಳಿ ಮತ್ತು ಕಾಶಿ ಹಳ್ಳಿಯಲ್ಲಿ ರಂಗನಾಥಸ್ವಾಮಿ ರಥೋತ್ಸವಗಳು ನಡೆಯುತ್ತವೆ.ರವಿ ಕುಂಭ ರಾಶಿಯಲ್ಲೂ, ಚಂದ್ರ ಸಿಂಹ ರಾಶಿಯಲ್ಲೂ ಸಂಚರಿಸುತ್ತಿದ್ದಾರೆ.
ಮಾರ್ಚ್ 12 ಬುಧವಾರ, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸ, ಶಿಶಿರ ಋತು, ಶುಕ್ಲ ಪಕ್ಷ, ತ್ರಯೋದಶಿ, ಮಕ್ಕ ನಕ್ಷತ್ರ, ಸುಕರ್ಮ ಯೋಗ, ತೈತಿಲಕರಣ ಇರತಕ್ಕಂತಹ ಈ ದಿನದ ರಾಹುಕಾಲ 12 ಗಂಟೆ 29 ನಿಮಿಷದಿಂದ 1ಗಂಟೆ 59 ನಿಮಿಷದವರೆಗೆ ರಾಹುಕಾಲ ಇರುತ್ತೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲ ಬೆಳಗ್ಗೆ 10 ಗಂಟೆ 59 ನಿಮಿಷದಿಂದ 12 ಗಂಟೆ 21 ನಿಮಿಷದವರೆಗೆ ಸಂಕಲ್ಪ ಕಾಲ ಇದೆ. ಬುಧವಾರ ಮಹಾ ಗಣಪತಿಯ ಲಹರಿಗಳು ಇರತ್ತದೆ. ವೆಂಕಟೇಶ್ವರನ ಆರಾಧನೆ ಮಾಡುವುದಕ್ಕೆ ಪ್ರಾಶಸ್ತ್ಯವಾದ ದಿನ ಕೂಡ ಆಗಿದೆ. ಚಿಕ್ಕನಾಯಕನಹಳ್ಳಿಯಲ್ಲಿ ಹಾಗೇ ಕಾಶಿ ಹಳ್ಳಿಯಲ್ಲಿ ರಂಗನಾಥ ಸ್ವಾಮಿಯ ರಥೋತ್ಸವಗಳು ನಡೆಯತವೆ. ಇಂದು ರವಿ ಕುಂಭ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ ಮಾಡ್ತಾ ಇದ್ದಾರೆ.