ರಿಷಭ್ ಪಂತ್ ಸಹೋದರಿ ಮದುವೆಯಲ್ಲಿ ಧೋನಿ, ರೈನಾ ಮಸ್ತ್ ಡ್ಯಾನ್ಸ್
ಭಾರತ ತಂಡದ ಸ್ಟಾರ್ ಆಟಗಾರ ರಿಷಭ್ ಪಂತ್ ಅವರ ಸಹೋದರಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಲಂಡನ್ ಮೂಲದ ಉದ್ಯಮಿ ಅಂಕಿತ್ ಚೌಧರಿಯನ್ನು ಸಾಕ್ಷಿ ಪಂತ್ ವರಿಸಲಿದ್ದು, ಇದೀಗ ಡೆಹ್ರಾಡೂನ್ನಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಮದುವೆ ಸಮಾರಂಭದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಸುರೇಶ್ ರೈನಾ ಹಾಗೂ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಸಹೋದರಿ ಸಾಕ್ಷಿ ಪಂತ್ ಉದ್ಯಮಿ ಅಂಕಿತ್ ಚೌಧರಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ವಿವಾಹ ಸಮಾರಂಭದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಸೇರಿದಂತೆ ಹಲವು ಪ್ರಮುಖರು ಕಾಣಿಸಿಕೊಂಡಿದ್ದರು.
ಡೆಹ್ರಾಡೂನ್ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಜೊತೆ ರಿಷಭ್ ಪಂತ್ ಜೊತೆಗೂಡಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನು ಈ ವಿವಾಹ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದರಲ್ಲೂ ರಿಷಭ್ ಪಂತ್ ಮುಂದಾಳತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರರು ಆರಕ್ಷತೆ ಕಾರ್ಯಕ್ರಮದ ವೇಳೆ ಹಾಜರಿರಲಿದ್ದಾರೆ ಎಂದು ವರದಿಯಾಗಿದೆ.

‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಜ್ಞಾವಿಧಿ

ಟಿವಿ9 ಎಕ್ಸ್ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?

ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್

ಸರ್ಕಾರದ ಕ್ರಮವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
