ಹೊಸ ಸೆಲೆರಿಯೊ ಸಿ ಎನ್ ಜಿ ಆವೃತ್ತಿಯನ್ನು ಲಾಂಚ್ ಮಾಡಿದೆ ಮಾರುತಿ ಸುಜುಕಿ, ಬೆಲೆ ರೂ. 6,58,000

| Updated By: shivaprasad.hs

Updated on: Jan 21, 2022 | 9:31 AM

ಈ ಕಾರು ಅಂದರೆ ಸೆಲೆರಿಯೊ ಸಿ ಎನ್ ಜಿ ಹೊಸ ಆವೃತ್ತಿ ಮುಂದಿನ ತಲೆಮಾರಿನ ಡುಯಲ್ ಜೆಟ್, ಡುಯಲ್ ವಿವಿಟಿ ಕೆ ಸಿರೀಸ್ 1.0 ಎಲ್ ಎಂಜಿನ್ ಹೊಂದಿದ್ದು ಕಂಪನಿಯ ಕ್ಲೇಮ್ ಮಾಡಿರುವ ಪ್ರಕಾರ ಪ್ರತಿ ಕೆಜಿ ಸಿ ಎನ್ ಜಿ 35.60 ಕಿಮೀ ಮೈಲೇಜ್ ನೀಡುತ್ತದೆ. ಕಾರಿನ ಸಿ ಎನ್ ಜಿ ಟ್ಯಾಂಕ್ ಸಾಮರ್ಥ್ಯ 60 ಲೀಟರ್ ಆಗಿದೆ.

ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಕಾರುಗಳನ್ನು ತಯಾರಿಸುವ ಮಾರುತಿ ಸುಜುಕಿ ಕಂಪನಿಯು ಹೊಸ ಸೆಲೆರಿಯೊ ಕಾರನ್ನು ಸಿ ಎನ್ ಜಿ ಆವೃತ್ತಿಯಲ್ಲಿ (CNG Variant) ಲಾಂಚ್ ಮಾಡಿದೆ. ಕಂಪನಿಯು ಆಲ್-ನ್ಯೂ ಸೆಲೆರಿಯೊ ಕಾರನ್ನು ಕಳೆದ ವರ್ಷ ನವೆಂಬರ್ ನಲ್ಲಿ ಲಾಂಚ್ ಮಾಡಿತ್ತು. ಹೊಸ ಸಿ ಎನ್ ಜಿ ಆವೃತ್ತಿಗೆ ಸೆಲೆರಿಯೊ ವಿ ಎಕ್ಸ್ ಐ (Celerio VXi) ಅಂತ ಹೆಸರಿಡಲಾಗಿದ್ದು ಅದರ ಎಕ್ಸ್ ಶೋರೂಮ್ (ex-showroom) ಬೆಲೆ ರೂ. 6,58, 000 ಆಗಿದೆ. ಸೆಲೆರಿಯೊ ಸಿ ಎನ್ ಜಿ ಹೊಸ ಆವೃತ್ತಿಯನ್ನು ಲಾಂಚ್ ಮಾಡಿರುವುದು ಕಂಪನಿಯ ಹಸಿರು ಪೋರ್ಟ್ ಪೋಲಿಯೋವನ್ನು ಮತ್ತಷ್ಟು ಬಲಪಡಿಸಿದೆ ಎಂದು ಮಾರುತಿ ಸುಜುಕಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಕಾರು ಅಂದರೆ ಸೆಲೆರಿಯೊ ಸಿ ಎನ್ ಜಿ ಹೊಸ ಆವೃತ್ತಿ ಮುಂದಿನ ತಲೆಮಾರಿನ ಡುಯಲ್ ಜೆಟ್, ಡುಯಲ್ ವಿವಿಟಿ ಕೆ ಸಿರೀಸ್ 1.0 ಎಲ್ ಎಂಜಿನ್ ಹೊಂದಿದ್ದು ಕಂಪನಿಯ ಕ್ಲೇಮ್ ಮಾಡಿರುವ ಪ್ರಕಾರ ಪ್ರತಿ ಕೆಜಿ ಸಿ ಎನ್ ಜಿ 35.60 ಕಿಮೀ ಮೈಲೇಜ್ ನೀಡುತ್ತದೆ. ಕಾರಿನ ಸಿ ಎನ್ ಜಿ ಟ್ಯಾಂಕ್ ಸಾಮರ್ಥ್ಯ 60 ಲೀಟರ್ ಆಗಿದೆ.

‘ಮಾರುತಿ ಸುಜುಕಿಯು ಫ್ಯಾಕ್ಟರಿಯಲ್ಲಿ ಅಳವಡಿಸಲಾದ ಸಿಎನ್‌ಜಿ ಕಾರುಗಳನ್ನು ದೇಶಕ್ಕೆ ನೀಡುವ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಭಾರತದ ರಸ್ತೆಗಳ ಮೇಲೆ ಓಡಾಡಯವ ಕಾರುಗಳನ್ನು ನೋಡುವುದಾದರೆ 8 ಸಿ ಎನ್ ಜಿ ಮಾದರಿಗಳ ಅತಿದೊಡ್ಡ ಪೋರ್ಟ್‌ಫೋಲಿಯೊವನ್ನು ನಾವು ಹೊಂದಿದ್ದೇವೆ ಮತ್ತು ಇದುವರೆಗೆ ಸುಮಾರು 9,50,000 ಎಸ್-ಸಿ ಎನ್ ಜಿ ವಾಹನಗಳನ್ನು ಮಾರಾಟ ಮಾಡಿದ್ದೇವೆ. ಫ್ಯಾಕ್ಟರಿ ಅಳವಡಿಸಿದ ಎಸ್-ಸಿ ಎನ್ ಜಿ ವಾಹನವನ್ನು ಹೊಂದುವುದು ಪ್ರಮಾಣಿತ ಖಾತರಿ ಪ್ರಯೋಜನಗಳೊಂದಿಗೆ ಮತ್ತು ಭಾರತದಾದ್ಯಂತ ಹರಡಿರುವ ಮಾರುತಿ ಸುಜುಕಿಯ ಸೇವಾ ನೆಟ್‌ವರ್ಕ್‌ನ ಅನುಕೂಲತೆಯೊಂದಿಗೆ ಲಭ್ಯವಾಗುತ್ತದೆ. ನಾವು ಒದಗಿಸುತ್ತಿರುವ ಸೇವೆ ನಮ್ಮ ಗ್ರಾಹಕರಿಗೆ ಬಹಳ ಇಷ್ಟವಾಗಿದೆ,’ ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಮಾರಾಟ) ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.

‘ಹಸಿರು ಚಲನಶೀಲತೆಯನ್ನು ಗಮನದಲ್ಲಿಟ್ಟುಕೊಂಡು, ಕಳೆದ ಐದು ವರ್ಷಗಳಲ್ಲಿ ನಮ್ಮ ಸಿ ಎನ್ ಜಿ ಕಾರುಗಳ ಮಾರಾಟದಲ್ಲಿ ಶೇಕಟಾ 22% ಸಿಜಿಎಅರ್ ಹೆಚ್ಚಳಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಗ್ರಾಹಕರು ತಾಂತ್ರಿಕವಾಗಿ ಸುಧಾರಿತ, ಪರಿಸರ ಸ್ನೇಹಿ ಮತ್ತು ಸುರಕ್ಷಿತ ಸಿಎನ್‌ಜಿ ಮೊಬಿಲಿಟಿ ಪರಿಹಾರಗಳನ್ನು ಸ್ವೀಕರಿಸುತ್ತಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ,’ ಎಂದು ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.

ಇದನ್ನೂ ಓದಿ:  ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 60 ವಿದ್ಯಾರ್ಥಿಗಳು, ಪರೀಕ್ಷಾ ಮೇಲ್ವಿಚಾರಕರು ದಾಳಿ ನಡೆಸಿದ ವಿಡಿಯೋ ವೈರಲ್