ಏಮ್ಸ್ ಆಸ್ಪತ್ರೆಯೊಳಗೆ ಲಿಫ್ಟ್​ನಲ್ಲೇ ಮಾಂಗಲ್ಯ ದೋಚಿ ಕಳ್ಳ ಪರಾರಿ

Updated on: Jan 27, 2026 | 7:46 PM

ಭಾರತದ ಪ್ರಮುಖ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಏಮ್ಸ್ ಭೋಪಾಲ್‌ನಲ್ಲಿ ನಡೆದ ಚಿನ್ನದ ಸರದ ಕಳ್ಳತನ ಘಟನೆಯು ಭದ್ರತೆಯ ಬಗ್ಗೆ ಆತಂಕ ಮೂಡಿಸಿದೆ. ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಆಸ್ಪತ್ರೆಯ ಲಿಫ್ಟ್‌ನಲ್ಲಿ ಮಹಿಳಾ ಉದ್ಯೋಗಿಯ ಸರ ದೋಚಿ ಪರಾರಿಯಾಗಿದ್ದಾನೆ. ಆ ಮಹಿಳೆ ಏಮ್ಸ್‌ನ ಸ್ತ್ರೀರೋಗ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿ.

ಭೋಪಾಲ್‌, ಜನವರಿ 27: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯು ಭದ್ರತಾ ಲೋಪವನ್ನು ಎತ್ತಿ ತೋರಿಸಿದೆ. ಭೋಪಾಲ್‌ನ (Bhopal) ಏಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಲಿಫ್ಟ್‌ನಿಂದ ಇಳಿಯುತ್ತಿದ್ದಾಗ, ಮಾಸ್ಕ್ ಧರಿಸಿದ್ದ ಕಳ್ಳನೊಬ್ಬ ಆಕೆಯ ಕುತ್ತಿಗೆಯಿಂದ ಮಂಗಳಸೂತ್ರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ಆಸ್ಪತ್ರೆಯೊಳಗಿನ ಲಿಫ್ಟ್‌ನ ಒಳಗೆ ನಡೆದಿರುವುದು ಆತಂಕಕಾರಿ ಸಂಗತಿ. ಸಿಸಿಟಿವಿ ದೃಶ್ಯಗಳ ಪ್ರಕಾರ, ಆರೋಪಿ ಆ ಮಹಿಳೆಯೊಂದಿಗೆ ಲಿಫ್ಟ್‌ನಲ್ಲಿಯೇ ಬಂದಿದ್ದಾನೆ. ಆಕೆ ಹೊರಗೆ ಹೋಗಲು ಲಿಫ್ಟ್ ಬಾಗಿಲು ತೆರೆದ ತಕ್ಷಣ ಅವನು ಆಕೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಕಸಿದುಕೊಂಡು ಓಡಿಹೋದನು. ಆಕೆ ಕಿರುಚುತ್ತಾ ಓಡಿದರೂ ಆತ ಪರಾರಿಯಾಗಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ