ಭೋಪಾಲ್‌ನ 27 ವರ್ಷದ ಮಾಡೆಲ್ ನಿಗೂಢ ಸಾವು; ಲವ್ ಜಿಹಾದ್ ಶಂಕೆ
ಭೋಪಾಲ್‌ನ 27 ವರ್ಷದ ರೂಪದರ್ಶಿ ಖುಷ್ಬೂ ಅಹಿರ್ವಾರ್ ಎಂಬಾಕೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆಕೆಯ ಕುಟುಂಬವು ಲವ್ ಜಿಹಾದ್ ಮತ್ತು ಕೊಲೆಯ ಆರೋಪ ಮಾಡಿದೆ. ಖುಷ್ಬೂ ಮಧ್ಯಪ್ರದೇಶದ ಬಮೋರಾ ಜಿಲ್ಲೆಯ ಮಂಡಿ ಬಮೋರಾ ನಿವಾಸಿಯಾಗಿದ್ದು, ಭೋಪಾಲ್‌ನಲ್ಲಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು. ಖಾಸಿಮ್ ಅಹ್ಮದ್ ಅಲಿಯಾಸ್ ರಾಹುಲ್ ಎಂಬ ವ್ಯಕ್ತಿ ಕೆಲವು ತಿಂಗಳ ಹಿಂದೆ ಆಕೆಗೆ ಪರಿಚಯವಾಗಿ ಉಜ್ಜಯಿನಿಗೆ ಕರೆದೊಯ್ದಿದ್ದ ಎನ್ನಲಾಗಿದೆ.

ಭೋಪಾಲ್, ನವೆಂಬರ್ 10: ಭೋಪಾಲ್‌ನ 27 ವರ್ಷದ ಮಾಡೆಲ್ ಖುಷ್ಬೂ ಅಹಿರ್ವಾರ್ ಇಂದು ಮುಂಜಾನೆ ನಿಗೂಢವಾಗಿ ಸಾವನ್ನಪ್ಪಿದ್ದು, ಆಕೆಯ ಬಾಯ್ಫ್ರೆಂಡ್ ಆಕೆಯನ್ನು ಮಧ್ಯಪ್ರದೇಶದ (Madhya Pradesh) ಸೆಹೋರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾನೆಂದು ಹೇಳಲಾಗಿದೆ. ಆಕೆಯ ಸಾವಿನ ಬಳಿಕ ಆತ ನಾಪತ್ತೆಯಾಗಿದ್ದಾನೆ.
ಸೆಹೋರ್ ಜಿಲ್ಲೆಯ ಭೈನ್ಸಖೇಡಿ ಆಸ್ಪತ್ರೆಯ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬದ ಮನವಿಯ ಮೇರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಪತ್ನಿ ಪಾಲಿಗೆ ಪ್ರೀತಿಸಿ ಮದುವೆಯಾದಾತನೇ ವಿಲನ್: ಪತಿ ಅಟ್ಟಹಾಸಕ್ಕೆ 6 ತಿಂಗಳ ಭ್ರೂಣ ಸಾವು
ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮೃತ ಯುವತಿಯ ತಾಯಿ ಲಕ್ಷ್ಮಿ ಅಹಿರ್ವಾರ್ ಆಸ್ಪತ್ರೆಯ ಹೊರಗೆ ದುಃಖ ವ್ಯಕ್ತಪಡಿಸಿದ್ದಾರೆ. “ಆಕೆಯ ದೇಹದಾದ್ಯಂತ ನೀಲಿ ಗುರುತುಗಳಿವೆ. ಆಕೆಯ ಮುಖ ಊದಿಕೊಂಡಿದೆ. ಆಕೆಯ ಖಾಸಗಿ ಭಾಗಗಳಿಗೆ ಗಾಯಗಳಾಗಿವೆ. ನನ್ನ ಮಗಳನ್ನು ಕ್ರೂರವಾಗಿ ಥಳಿಸಿ ಕೊಲ್ಲಲಾಗಿದೆ. ನಮಗೆ ನ್ಯಾಯ ಬೇಕು. ಆಕೆಯನ್ನು ಕೊಂದವರಿಗೆ ಶಿಕ್ಷೆಯಾಗಬೇಕು” ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: 8 ಪಿಸ್ತೂಲ್, 350 ಕೆಜಿ ಸ್ಫೋಟಕ, 12 ಸೂಟ್ಕೇಸ್; ಫರಿದಾಬಾದ್ ವೈದ್ಯರ ಪ್ರಕರಣಕ್ಕೆ ಹೊಸ ತಿರುವು
ಕುಟುಂಬದ ಪ್ರಕಾರ, ಆ ಯುವತಿ ಖಾಸಿಮ್ ಎಂಬ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಿದಾಗಿನಿಂದ ಆತ ಕಾಣೆಯಾಗಿದ್ದಾನೆ. ಆತನೇ ಆಕೆಯನ್ನು ಉಜ್ಜಯಿನಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿಂದ ಭೋಪಾಲ್‌ಗೆ ಹಿಂತಿರುಗುತ್ತಿದ್ದಾಗ ಖುಷ್ಬೂ ಸ್ಥಿತಿ ಹದಗೆಟ್ಟಿತು. ಆಕೆ ಪ್ರಜ್ಞಾಹೀನಳಾಗಿರುವುದನ್ನು ನೋಡಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಖಾಸಿಮ್ ಓಡಿಹೋದನು ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಕುಟುಂಬಸ್ಥರು ಲವ್ ಜಿಹಾದ್ ಆರೋಪವನ್ನೂ ಮಾಡಿದ್ದಾರೆ. ಖಾಸಿಮ್ ಮತ್ತು ಅವರ ಕೆಲವು ಸ್ನೇಹಿತರು ಆಕೆಯನ್ನು ಹೊಡೆದಿದ್ದಾರೆ, ಆಕೆಯ ಕುತ್ತಿಗೆಯ ಮೇಲೆ ಗಾಯಗಳಾಗಿವೆ. ಆಕೆಯ ದೇಹದಾದ್ಯಂತ ನೀಲಿ ಮತ್ತು ಹಸಿರು ಗುರುತುಗಳಿವೆ ಎಂದು ಖುಷ್ಬೂ ಅವರ ಕುಟುಂಬ ಆರೋಪಿಸಿದೆ. ಆರೋಪಿಯು ಖುಷ್ಬೂ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದನು ಎಂದು ಕೂಡ ಅವರು ಆರೋಪಿಸಿದ್ದಾರೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




