ಮಧ್ಯಪ್ರದೇಶ: ಮಾಟಮಂತ್ರ ಶಂಕೆ, ತಾಯಿಯನ್ನೇ ಕೊಂದು ಹೊಲದಲ್ಲಿ ಹೂತುಹಾಕಿದ ಮಗ
ಮಾಟಮಂತ್ರ ಶಂಕೆಯಿಂದ ವ್ಯಕ್ತಿಯೊಬ್ಬ ತಾಯಿಯನ್ನೇ ಕೊಲೆ ಮಾಡಿ, ಹೊಲದಲ್ಲಿ ಹೂತು ಹಾಕಿರುವ ಘಟನೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ನಡೆದಿದೆ. ತಾಯಿ ಮಾಟ ಮಂತ್ರ ಮಾಡುತ್ತಿದ್ದಾಳೆಂದು ಸಾಕಷ್ಟು ದಿನದಿಂದ ಆನುಮಾನಪಟ್ಟಿದ್ದ ಮಗ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ಸ್ಥಳೀಯ ಸಮುದಾಯವನ್ನು ಬೆಚ್ಚಿಬೀಳಿಸಿದ್ದು, ಗ್ರಾಮೀಣ ಭಾರತದಲ್ಲಿ ಆಳವಾಗಿ ಬೇರೂರಿರುವ ಮೂಢನಂಬಿಕೆಯ ಸಮಸ್ಯೆಯ ಬಗ್ಗೆ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದೆ.

ಭೋಪಾಲ್, ನವೆಂಬರ್ 08: ಮಾಟಮಂತ್ರ ಶಂಕೆಯಿಂದ ವ್ಯಕ್ತಿಯೊಬ್ಬ ತಾಯಿಯನ್ನೇ ಕೊಲೆ(Murder) ಮಾಡಿ, ಹೊಲದಲ್ಲಿ ಹೂತು ಹಾಕಿರುವ ಘಟನೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ನಡೆದಿದೆ. ತಾಯಿ ಮಾಟ ಮಂತ್ರ ಮಾಡುತ್ತಿದ್ದಾಳೆಂದು ಸಾಕಷ್ಟು ದಿನದಿಂದ ಆನುಮಾನಪಟ್ಟಿದ್ದ ಮಗ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ಸ್ಥಳೀಯ ಸಮುದಾಯವನ್ನು ಬೆಚ್ಚಿಬೀಳಿಸಿದ್ದು, ಗ್ರಾಮೀಣ ಭಾರತದಲ್ಲಿ ಆಳವಾಗಿ ಬೇರೂರಿರುವ ಮೂಢನಂಬಿಕೆಯ ಸಮಸ್ಯೆಯ ಬಗ್ಗೆ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದೆ.
ಛತ್ತೀಸ್‌ಗಢ ಗಡಿಯ ಸಮೀಪದಲ್ಲಿರುವ ಶಹದೋಲ್ ಜಿಲ್ಲೆಯ ಝಿಕ್‌ಬಿಜುರಿ ಪೊಲೀಸ್ ಹೊರಠಾಣೆ ವ್ಯಾಪ್ತಿಯ ಕುಟೇಲಾ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಪೊಲೀಸರ ಪ್ರಕಾರ, 25 ವರ್ಷದ ಸತ್ಯೇಂದ್ರ ಸಿಂಗ್ ತನ್ನ ಚಿಕ್ಕಪ್ಪನ ಸಾವಿಗೆ ಮತ್ತು ಕುಟುಂಬದ ಮಕ್ಕಳ ಅನಾರೋಗ್ಯಕ್ಕೆ ತನ್ನ ತಾಯಿ ಪ್ರೇಮಬಾಯಿ ಕಾರಣ ಎಂದು ಶಂಕಿಸಿದ್ದ.
ಕೋಪದಿಂದ, ಸತ್ಯೇಂದ್ರ ತನ್ನ ಸೋದರಸಂಬಂಧಿ ಓಂಪ್ರಕಾಶ್ ಜೊತೆಗೂಡಿ ತನ್ನ ತಾಯಿಯ ಮೇಲೆ ಕೊಡಲಿ ಮತ್ತು ಕೋಲುಗಳಿಂದ ಹಲ್ಲೆ ಮಾಡಿದ್ದಾನೆ. ಆಕೆಯು ಪರಿ ಪರಿಯಾಗಿ ಬೇಡಿಕೊಂಡರೂ, ಆಕೆ ಸಾಯುವವರೆಗೂ ಅವನು ನಿರ್ದಯವಾಗಿ ಅವಳನ್ನು ಹೊಡೆಯುತ್ತಲೇ ಇದ್ದರು. ಆಕೆಯ ಉಸಿರಾಟ ನಿಂತಾಗ, ಆಕೆಯ ಸಾವನ್ನು ಖಚಿತಪಡಿಸಲು ಆಕೆಯ ಕತ್ತು ಹಿಸುಕಿದ್ದಾನೆ.
ಮತ್ತಷ್ಟು ಓದಿ: ಶೀಲ ಶಂಕಿಸಿ ಪತ್ನಿ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ: ಕಿಂಚಿತ್ತು ಪಶ್ಚಾತ್ತಾಪವಿಲ್ಲದೇ ಪತಿ ಬಿಚ್ಚಿಟ್ಟ ಮರ್ಡರ್ ಕಹಾನಿ
ಕೊಲೆಯ ನಂತರ, ಸತ್ಯೇಂದ್ರ ತನ್ನ ಸೋದರಸಂಬಂಧಿ ಮತ್ತು ಇತರ ಕುಟುಂಬ ಸದಸ್ಯರಾದ ಗುಲಾಬ್ ಸಿಂಗ್, ಅಮನ್ ಸಿಂಗ್ ಮತ್ತು ಅಮೋದ್ ಸಿಂಗ್ ಅವರ ಸಹಾಯದಿಂದ ಅಪರಾಧವನ್ನು ಮರೆಮಾಡಲು ಶವವನ್ನು ಹತ್ತಿರದ ಹೊಲದಲ್ಲಿ ಹೂತುಹಾಕಿದ್ದಾನೆ. ಪೊಲೀಸರು ಸುಳಿವು ಪಡೆದು ಸ್ಥಳವನ್ನು ಅಗೆದು ಹೂತಿಟ್ಟ ದೇಹವನ್ನು ವಶಪಡಿಸಿಕೊಂಡಾಗ ಈ ಭೀಕರ ಕೃತ್ಯ ಬೆಳಕಿಗೆ ಬಂದಿತು.
ಆರೋಪಿಗಳು ಸಾಕ್ಷ್ಯ ನಾಶಮಾಡಲು ಶವವನ್ನು ಹೊಲದಲ್ಲಿ ಹೂತು ಹಾಕಿದ್ದಾರೆ. ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲಾ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಕೇವಲ ಎರಡು ದಿನಗಳ ಹಿಂದೆ, ಬ್ಯೋಹರಿ ಪ್ರದೇಶದ ಬರ್ಕಾಚ್ ಗ್ರಾಮದಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿತ್ತು, ಅಲ್ಲಿ ಕೂಡ ಮಗನೊಬ್ಬ ವಾಮಾಚಾರದ ಅನುಮಾನದ ಮೇಲೆ ತನ್ನ ತಾಯಿಯನ್ನು ಕೊಂದಿದ್ದ.
ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




